ರಾಣಿ ಎಲಿಜಬೆತ್ ಬರೆದಿದ್ದಾರೆ ರಹಸ್ಯಮಯ ಪತ್ರ, ಇನ್ನೂ 63 ವರ್ಷ ಇದನ್ನು ಓದುವಂತಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಣಿ ಎಲಿಜಬೆತ್ ಬರೆದಿರುವ ರಹಸ್ಯಮಯ ಪತ್ರವೊಂದು ಸಿಡ್ನಿಯಲ್ಲಿದೆ, ಇದನ್ನು 2085 ರವರೆಗೆ ಹೊರತೆಗೆಯಲು ಆಗುವುದಿಲ್ಲ!
ಹೌದು, ಕ್ವೀನ್ ಎಲಿಜಬೆತ್ ಸಿಡ್ನಿ ಜನತೆಯನ್ನುದ್ದೇಶಿಸಿ ಪತ್ರವೊಂದನ್ನು ಬರೆದಿದ್ದಾರೆ. ಇದನ್ನು ಸಿಡ್ನಿಯ ಐತಿಹಾಸಿಕ ಕಟ್ಟಡವೊಂದರ ಕಮಾನಿನಲ್ಲಿ ಬಚ್ಚಿಡಲಾಗಿದೆ. ಇನ್ನೂ 63 ವರ್ಷಗಳ ಕಾಲ ತೆಗೆಯುವಂತಿಲ್ಲ.

ಈ ಬಗ್ಗೆ ರಾಣಿಯವರ ಖಾಸಗಿ ಸಿಬ್ಬಂದಿಗೂ ಮಾಹಿತಿ ಇಲ್ಲ. ಪತ್ರ ಸಿಡ್ನಿ ಮೇಯರ್‌ಗೆ ಅಡ್ರೆಸ್ ಮಾಡಲಾಗಿದೆ. ಈ ಪತ್ರದ ಮೇಲೆ 2085 ರ ನಂತರ ನೀವಂದುಕೊಂಡ ದಿನದಂದು ತೆಗೆಯಿರಿ, ಹಾಗೂ ನನ್ನ ಸಂದೇಶವನ್ನು ಸಿಡ್ನಿ ಜನತೆಗೆ ಹೇಳಿ ಎಂದು ಬರೆದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!