ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲೆಸೆತಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಏಳು ಮಂದಿ ಗಾಯಗೊಂಡಿದ್ದು, ಹಿಂದೂಗಳಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲವಾ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಹಿಂದೂಗಳಿಗೆ ರಕ್ಷಣೆ ಕೊಡೋದಿಲ್ವಾ? ಜಾತ್ಯಾತೀತ ಸಿದ್ದರಾಮಯ್ಯನವರೇ ಶಿವಮೊಗ್ಗದ ಮುಗ್ಧ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತು ಇದೆಯೇ ಎಂದು ಬಿಜೆಪಿ ಸವಾಲ್ ಹಾಕಿದೆ.
ತಲ್ವಾರ್ ಮೆರವಣಿಗೆ ಸಮಾಜಕ್ಕೆ ಯಾವ ರೀತಿ ಸಂದೇಶ ನೀಡುತ್ತದೆ, ಶಾಂತಿಯ ಬೀಡಾಗಿದ್ದ ಶಿವಮೊಗ್ಗದಲ್ಲಿ ಇಂಥ ಗಲಭೆ ಯಾಕಾಯಿತು? ತಲ್ವಾರ್ ಮೆರವಣಿಗೆಗೆ ಅನುಮತಿ ಕೊಟ್ಟವರ‍್ಯಾರು? ಗಣೇಶ ಇಡೋದಕ್ಕೆ ನೂರೆಂಟು ಅನುಮತಿ ಪಡೆಯಬೇಕು ಆದರೆ ಇಂಥ ಸೂಕ್ಷ್ಮ ವಿಚಾರಕ್ಕೆ ಅನುಮತಿ ಬೇಡ್ವಾ? ಎಂದು ಪ್ರಶ್ನಿಸಿದೆ.