ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ವಿಶ್ವಕಪ್ ಟೂರ್ನಿಗಾಗಿ ವಾರ್ಮ್ ಅಪ್ ಮ್ಯಾಚ್‌ಗಳು ನಡೆಯುತ್ತಿವೆ. ನಾಳೆ ನೆದರ್ಲೆಂಡ್ಸ್ ವಿರುದ್ಧ ಭಾರತ ಅಭ್ಯಾಸ ಪಂದ್ಯ ಆಡಲಿದೆ, ತಿರುವನಂತಪುರದಲ್ಲಿ ಮ್ಯಾಚ್ ನಡೆಯಲಿದ್ದು, ಈಗಾಗಲೇ ಟೀಂ ತಿರುವನಂತಪುರ ತಲುಪಿದೆ.
ಆದರೆ ಟೀಂನಲ್ಲಿ ವಿರಾಟ್ ಕೊಹ್ಲಿ ಮಾತ್ರ ಇಲ್ಲ! ಹೌದು, ಫ್ಯಾಮಿಲಿ ಎಮರ್ಜೆನ್ಸಿ ಇದೆ ಎಂದು ಹೇಳಿ ವಿರಾಟ್ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.
ಕುಟುಂಬದಲ್ಲಿ ತುರ್ತುಪರಿಸ್ಥಿತಿ ಉಂಟಾಗಿದೆ ಎಂದು ಮ್ಯಾನೇಜ್‌ಮೆಂಟ್ ಬಳಿ ಮಾತನಾಡಿದ್ದು, ಮುಂಬೈಗೆ ತೆರಳಲು ಅನುಮತಿ ಪಡೆದಿದ್ದಾರೆ.
ನಾಳೆ ತಿರುವನಂತಪುರದಲ್ಲಿ ನಡೆಯುವ ಅಭ್ಯಾಸ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಪಂದ್ಯ ರದ್ದಾಗುವ ಸಾಧ್ಯತೆಯೂ ಇದೆ.