ಇಂಡಿಯಾ- ಪಾಕ್ ಗಡಿಯಲ್ಲಿ ಹೆರಾಯಿನ್ ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತ- ಪಾಕಿಸ್ತಾನ ಗಡಿ ಬಳಿ ಭದ್ರತಾ ಪಡೆಗಳು ಭಾನುವಾರ ಡ್ರೋನ್ ಹೊಡೆದುರುಳಿಸಿದ್ದು, 5 ಕೆಜಿ ಹೆರಾಯಿನ್ ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾನೆ 4 ಗಂಟೆ ಸುಮಾರಿನಲ್ಲಿ ಡ್ರೋನ್ ಶಬ್ದ ಕೇಳಿಸಿಕೊಂಡ ಗಡಿ ಭದ್ರತಾ ಪಡೆ ಮತ್ತು ಅಮೃತಸರ ಪೊಲೀಸರು ಕಕ್ಕರ್ ಗ್ರಾಮದ ಲೋಪೋಕ್ ಪ್ರದೇಶದಲ್ಲಿ ಅದನ್ನು ಹೊಡೆದುರುಳಿಸಿರುವುದಾಗಿ ಅವರು ಪಂಜಾಬ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಮೃತಸರ ಪೊಲೀಸರು, ಬಿಎಸ್ ಎಫ್ ಯೋಧರು ಜಂಟಿ ಕಾರ್ಯಾಚರಣೆ ನಡೆಸಿ, ಡ್ರೋನ್ ಹೊಡೆದುರುಳಿಸಿದ್ದು, 5 ಕೆಜಿ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ ಎಂದು ಪಂಜಾಬ್ ಡಿಜಿಪಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಎಕೆ-47 ನಿಂದ ಒಟ್ಟು 12 ಸುತ್ತು ಗುಂಡು ಹಾರಿಸಿ ಇಬ್ಬರನ್ನು ಬಂಧಿಸಲಾಗಿದೆ. ಪತ್ತೆಯಾದ ಡ್ರೋನ್ ಬಿಡಿಭಾಗಗಳನ್ನು ಅಮೆರಿಕ ಮತ್ತು ಚೀನಾದಲ್ಲಿ ತಯಾರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!