ಲೋಕಸಭೆಯಲ್ಲಿ ಭದ್ರತಾ ಲೋಪ: ಸಂಸದ ಪ್ರತಾಪ್​​​ ಸಿಂಹ ಮೊದಲ ಟ್ವೀಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
 
ಲೋಕಸಭೆ ಕಲಾಪದ ವೇಳೆ ಭಾರಿ ಭದ್ರತಾ ಲೋಪದ ಬಳಿಕ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಅವರಲ್ಲಿ ಇಬ್ಬರೂ ಮೈಸೂರಿನವರು ಎಂದು ತಿಳಿದುಬಂದಿದೆ. ಮೈಸೂರು ಸಂಸದ ಪ್ರತಾಪ್​​​ ಸಿಂಹ ಪಿಎ ಈ ಇಬ್ಬರಿಗೆ ಎಂಟ್ರಿ ಪಾಸ್​​ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಗಾಗಿ ಸಂಸದ ಪ್ರತಾಪ್​​​ ಸಿಂಹ (Pratap Simha) ಅವರನ್ನು ಸಹ ವಿಚಾರಣೆಗೆ ಒಳಪಡಿಸಿ ಎಂದು ರಾಜ್ಯ ನಾಯಕರು ಹೇಳಿದ್ದು, ಮತ್ತೊಂದೆಡೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.

ಇದರ ಬೆನ್ನೆಲೆ ಸಂಸದ ಪ್ರತಾಪ್​​​ ಸಿಂಹ ಟ್ವೀಟ್​ ಮಾಡಿದ್ದಾರೆ. ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ವಿದ್ಯಾರ್ಥಿಗಳೊಂದಿಗಿನ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

‘ಸೋಮವಾರ ವಿದ್ಯಾವರ್ಧಕ ಕಾಲೇಜಿನ ರಾಜ್ಯಶಾಸ್ತ್ರ ವಿದ್ಯಾರ್ಥಿಗಳೊಂದಿಗೆ’ ಎಂದು ಬರೆದುಕೊಂಡಿದ್ದಾರೆ. ಮೈಸೂರಿನ ಇಬ್ಬರಿಗೆ ಎಂಟ್ರಿ ಪಾಸ್​ ಬಗ್ಗೆ ಸಂಸದ ಪ್ರತಾಪ್​​​ ಸಿಂಹ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಲೋಕಸಭೆಯಲ್ಲಿ ಆತಂಕ ಸೃಷ್ಟಿಸಿದ್ದವರ ಪೈಕಿ ಒಬ್ಬ ಸಾಗರ್​ ಶರ್ಮಾ ಆಗಿದ್ದರೆ, ಮತ್ತೋರ್ವ ಮೈಸೂರು ಮೂಲದ ವಿದ್ಯಾರ್ಥಿ ಮನೋರಂಜನ್ ಅಂತ ಹೇಳಲಾಗುತ್ತಿದೆ. ಸಂಸದ ಪ್ರತಾಪ್ ಸಿಂಹ ಪಿಎ ಮೂಲಕ ಈ ಇಬ್ಬರು ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಗೆ ಎಂಟ್ರಿ ಕೊಟ್ಟಿದ್ದರು ಎನ್ನಲಾಗುತ್ತಿದೆ. ಇಬ್ಬರನ್ನ ದೆಹಲಿ ಪೊಲೀಸರು ಬಂಧಿಸಿದ್ದು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!