ಲೋಕಸಭೆಯಲ್ಲಿ ಭದ್ರತಾ ಲೋಪ: ಅರಕಲಗೂಡದ ಮನೋರಂಜನ್ ಮನೆಗೆ ಪೊಲೀಸರ ಭೇಟಿ, ಪರಿಶೀಲನೆ

ಹೊಸದಿಗಂತ ವರದಿ ಅರಕಲಗೂಡು :

ಲೋಕಸಭೆ ಕಲಾಪ ಸ್ಥಳಕ್ಕೆ ತೆರೆಳಿದ್ದ ನಾಲ್ವರಲ್ಲಿ ಮನೋರಂಜನ್ ಎಂಬಾತ ಅರಕಲಗೂಡು ತಾಲ್ಲೂಕು ಮಲ್ಲಾಪುರ ಗ್ರಾಮದವನಾಗಿದ್ದು, ಈತನ ಬಗೆಗಿನ ಮಾಹಿತಿ ಸಂಗ್ರಹಣೆಗಾಗಿ ಅರಕಲಗೂಡು ಪೋಲಿಸರು ಸ್ಥಳಕ್ಕೆ ಮಲ್ಲಾಪುರಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ .

ಮನೋರಂಜನ್ ೧೯೮೯ರಲ್ಲಿ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಜನಿಸಿದ್ದ. ತಂದೆ ದೇವರಾಜೇಗೌಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ತೆರಳಿ ಸದ್ಯ ವಿಜಯನಗರದಲ್ಲಿ ಕುಟುಂಬ ಸಮೇತರಾಗಿ ವಾಸವಿದ್ದಾರೆ. ಈತ ಮೈಸೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ವಿದ್ಯಾಭ್ಯಾಸ, ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ , ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಇಂಜಿನೀಯರಿಂಗ್ ಪೂರ್ಣಗೊಳಿಸಿ ಮನೆಯಲ್ಲಿದ್ದ ಎನ್ನಲಾಗಿದೆ.

ಘಟನೆ ನಡೆದ ಬೆನ್ನಲ್ಲೇ ಮೈಸೂರಿನ ಪೊಲೀಸರು ಮನೋರಂಜನ್ ನಿವಾಸಕ್ಕೂ ಕೂಡ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೇಯೇ ಅರಕಲಗೂಡು ತಾಲೂಕಿನ ಮಲ್ಲಾಪುರದಲ್ಲಿ ಇರುವ ಜಮೀನಿಗೂ ಅರಕಲಗೂಡು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಂಧಿತ ಮನೋರಂಜನ್ ತಂದೆ ದೇವರಾಜೇಗೌಡ ಅವರು ಒಂದು ಟೈಲ್ಸ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ನಂತರ ಬಂದ ಹಣದಲ್ಲಿ ಎಂಟು ಎಕರೆ ಜಮೀನನ್ನು ಮೈಸೂರು ಜಿಲ್ಲೆಯ ಪಿರಿಯಪಟ್ಟಣ ತಾಲೂಕು ಹಾಗೂ ಅರಕಲಗೂಡು ತಾಲೂಕಿನ ನಡುವೆ ಇರುವ ಮಲ್ಲಾಪುರ ಗ್ರಾಮದಲ್ಲಿ ಖರೀದಿ ಮಾಡಿದ್ದಾರೆ. ಜಮೀನನ್ನು ಸದ್ಯ ನಾಲ್ಕು ಎಕರೆ ಮಗಳಿಗೆ ಹಾಗೂ ಮಗ ಮನೊರಂಜನ್ ಗೆ ನಾಲ್ಕು ಎಕರೆ ಬರೆದ್ದಿದ್ದಾರೆ. ಜಮೀನಿನಲ್ಲಿ ಕುರಿ ಮತ್ತು ಕೋಳಿ ಶೆಡ್ ನಿರ್ಮಾಣ ಮಾಡಿದ್ದಾರೆ. ತಂದೆಯೇ ಹದಿನೈದು ದಿನಕ್ಕೊಮ್ಮೆ ಬಂದು ನೋಡಿಕೊಳ್ಳುತ್ತಿದ್ದಾರೆ. ದೇವರಾಜೇಗೌಡರು ವಿರಾಜಪೇಟೆ ಸಮೀಪದ ಸಿದ್ದಾಪುರದಲ್ಲಿ ಹೋಂ‌ ಸ್ಟೇ ಅನ್ನು ಹೊಂದಿದ್ದಾರೆ. ಆಗಾಗ್ಗೆ ಮನೋರಂಜನ್ ಮಲ್ಲಾಪುರಕ್ಕೆ ಹಾಗೂ ಗ್ರಾಮದ ಸಮೀಪ ಹೋಂಸ್ಟೇ ಗೂ ಸಹ ಬರುತ್ತಿದ್ದ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!