ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಈ ಬಾರಿ ನಡೆದ 22ನೇ ಚಿತ್ರಸಂತೆಗೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಒಟ್ಟಾರೆ 22 ರಾಜ್ಯಗಳಿಂದ 1,500 ಸಾವಿರಕ್ಕೂ ಹೆಚ್ಚು ಕಲಾವಿದರು ಆಗಮಿಸಿದ್ದು, ಚಿತ್ರಸಂತೆಯ ಮೆರುಗು ಹೆಚ್ಚಿದೆ.
ಶಿವಾನಂದ ವೃತ್ತದಿಂದ ವಿಡ್ಸರ್ ಮ್ಯಾನರ್ವರೆಗೂ 22ನೇ ವರ್ಷದ ಚಿತ್ರ ಸಂತೆ ಆಯೋಜಿಸಲಾಗಿದೆ. ಚಿತ್ರ ಸಂತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವಿವಾರ ಚಾಲನೆ ನೀಡಿದರು.
ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣು ಮಗುವಿಗೆ ಅರ್ಪಣೆ ಮಾಡಲಾಗಿದೆ. ಈ ಹಿನ್ನೆಲೆ ಚಿತ್ರ ಕಲಾಪರಿಷತ್ತಿನ ಮುಂಭಾಗದಲ್ಲಿ ಪೇಪರ್ ಬೈಂಡಿಂಗ್‌ನಿಂದ ಬೃಹತ್ ಹೆಣ್ಣು ಮಗುವಿನ ಕಲಾಕೃತಿ ಮಾಡಲಾಗಿದೆ.