Saturday, March 25, 2023

Latest Posts

PHOTO GALLERY| ರಾಜಕೀಯ ನಾಯಕರ ಹೋಳಿ ಸಂಭ್ರಮ ಹೇಗಿತ್ತು ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದೆಲ್ಲೆಡೆ ನಿನ್ನೆಯಿಂದ ಹೋಳಿ ಸಂಭ್ರಮ ಮನೆ ಮಾಡಿದೆ. ಈಶಾನ್ಯ ರಾಜ್ಯಗಳ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಗುವಾಹಟಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಗರದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಗುವಾಹಟಿ ನಗರಕ್ಕೆ ಆಗಮಿಸುತ್ತಿದ್ದಂತೆ ನಗರದ ಜನತೆ ಹೋಳಿ ಎರಚಿ ಸಂಭ್ರಮಿಸಿದರು.

ಪ್ರಧಾನಿ ಬೆಂಗಾವಲು ಪಡೆ ಸಾಗಿದ ರಸ್ತೆಗಳ ಎರಡೂ ಬದಿಯಲ್ಲಿ ಜನರು ಸಾಲುಗಟ್ಟಿ ನಿಂತು ಬಣ್ಣ, ಹೂಗಳಿಂದ ಪ್ರಧಾನಿ ಮೋದಿಗೆ ಶುಭಾಶಯ ಕೋರಿದರು.

ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಜಿನಾ ರೈಮಂಡೊ ಅವರು ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಆಗಮಿಸಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡರು. ಹೋಳಿ ಆಚರಣೆಯಲ್ಲಿ ಜನರೊಂದಿಗೆ ಸೇರಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿದರು.

ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರ ನಿವಾಸದಲ್ಲಿ ಆಚರಿಸಲಾದ ಹೋಳಿ ಸಂಭ್ರಮದಲ್ಲಿ ವಿದೇಶಾಂಗ ಸಚಿವ ಜೈಶಂಕರ್‌ ಭಾಗಿಯಾಗಿದ್ದರು.

Image

Image ಭಾರತೀಯ ಕ್ರಿಕೆಟ್‌ ತಂಡದ ಹೋಳಿ ಸಂಭ್ರಮವನ್ನು ನೀವೂ ಕಣ್ತುಂಬಿಕೊಳ್ಳಿ

Image

Image

Image

Image

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!