Sunday, October 1, 2023

Latest Posts

ನಾಳೆ ಕೈ ನಾಯಕರ ಸಭೆ ಕರೆದ ಸೋನಿಯಾ ಗಾಂಧಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೆಪ್ಟೆಂಬರ್ 18‌ ರಿಂದ 23ರ ವರೆಗೆ ನಡೆಯಲಿರುವ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನದ ಬಗ್ಗೆ ಚರ್ಚಿ ನಡೆಸಲು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರು ನಾಳೆ ಸಂಜೆ ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಮಿತಿ ಸಭೆ ಕರೆದಿದ್ದಾರೆ.

ನಾಳೆ 5 ಗಂಟೆಗೆ ನವದೆಹಲಿಯಲ್ಲಿ ನಡೆಯಲಿರುವ ಈ ಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‍ಸಿಪಿಯ ಶರದ್ ಪವಾರ್, ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್, ನಿತೀಶ್‍ಕುಮಾರ್, ಸ್ಟಾಲಿನ್ ಸೇರಿದಂತೆ ಆಯ್ದ ಪ್ರಮುಖರನ್ನು ಆಹ್ವಾನಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಧಿವೇಶನದ ಜಂಟಿ ಕಾರ್ಯತಂತ್ರವನ್ನು ಚರ್ಚಿಸಲು ಹೊಸದಾಗಿ ರಚಿಸಲಾದ ಇಂಡಿಯಾ ಒಕ್ಕೂಟದ ಸಭೆಯನ್ನು ಕರೆದಿದ್ದಾರೆ. ಈ ವಿಶೇಷ ಸಂಸತ್‌ ಅಧಿವೇಶನದ ಅಜೆಂಡಾ ಇನ್ನೂ ಬಹಿರಂಗವಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!