ಟ್ವಿಟರ್‌ನಲ್ಲಿ ಹರಿದಾಡುವ ಈ ವಿಡಿಯೋ ನೋಡಿ ಜನ ಕೇಳ್ತಿದ್ದಾರೆ ‘ಕೌನ್ ಹೆ ಯೇ ಬಾಹುಬಲಿ?!’

ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ಜನರು ‘ಕೌನ್ ಹೆ ಯೇ ಬಾಹುಬಲಿ…’ ಎಂದು ಅಚ್ಚರಿಯಿಂದ ಕೇಳುತ್ತಿದ್ದಾರೆ!
ಅಂದಹಾಗೆ ಕಾರ್ಮಿಕನೋರ್ವ ಬೈಕನ್ನೇ ತಲೆಯಲ್ಲಿ ಹೊತ್ತುಕೊಂಡು ಬಸ್‌ನ ಟಾಪ್ ಏರುತ್ತಿರುವ ದೃಶ್ಯ ಇದಾಗಿದೆ. ಇದನ್ನು ನೋಡಿದ ನೆಟ್ಟಿಗರು, ಇವರೇ ನಿಜವಾದ ಬಾಹುಬಲಿ! ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ೯೦ ಸಾವಿರ ಜನರು ನೋಡಿದ್ದು, ೫ ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
ತಲೆ ಮೇಲೆ ಹೊತ್ತುಕೊಂಡ ಯಾವುದೇ ವಸ್ತುವಾದರೂ ಸ್ವಲ್ಪ ಬ್ಯಾಲೆನ್ಸ್ ತಪ್ಪಿದರೆ ನೆಲಕ್ಕುರುಳುತ್ತದೆ. ಅಂತದ್ದರಲ್ಲಿ ಈತ ಮಾತ್ರ ಯಾವುದೇ ಆಧಾರ ಪಡೆಯದೆ ಸಲೀಸಾಗಿ ತಲೆ ಮೇಲೆ ಬೈಕ್ ಹೊತ್ತು ಬಸ್ಸು ಹತ್ತಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!