April 15, 2026
Wednesday, April 15, 2026
spot_img

ರಾಜ್ಯಾದ್ಯಂತ ಇಂದು ಸ್ವಯಂ ಗಣತಿ ಅಂತ್ಯ, ನಾಳೆಯಿಂದ ಮನೆಗಣತಿ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಸರ್ಕಾರದ ‘ಜನಗಣತಿ-2027’ ಭಾಗವಾಗಿ ಕರ್ನಾಟಕದಲ್ಲಿ ಏ.1ರಿಂದ ಆರಂಭವಾದ ಸ್ವಯಂ ಗಣತಿ ಏ.15ಕ್ಕೆ ಮುಗಿಯಲಿದ್ದು, ಏ.16ರಿಂದ ಒಂದು ತಿಂಗಳ ಕಾಲ ‘ಮನೆ ಗಣತಿ ಮತ್ತು ಮನೆಗಳ ಪಟ್ಟಿ ತಯಾರಿಕೆ’ ನಡೆಯಲಿದೆ.

ಗಣತಿದಾರರು ನಿಮ್ಮ ಮನೆಗೆ ಬಂದು ಪ್ರತಿಯೊಂದು ಮಾಹಿತಿಯನ್ನು ಕಲೆಹಾಕಲಿದ್ದಾರೆ. ಮನೆಯಲ್ಲಿ ಎಷ್ಟು ರೂಮುಗಳಿಗೆ, ಹೆಂಚಿನ ಮನೆಯಾ? ಮೂಲಸೌಕರ್ಯ ಇದೆಯಾ? ಆಸ್ತಿ ಎಷ್ಟಿದೆ ಹೀಗೆ ಎಲ್ಲ ವಿವರಗಳನ್ನು ಕಲೆಹಾಕಲಿದ್ದಾರೆ.

16 ವರ್ಷಗಳ ಬಳಿಕ ದೇಶದಲ್ಲಿ ನಡೆಯುತ್ತಿರುವ ಜನಗಣತಿಯಲ್ಲಿ ‘ಮನೆಗಳ ಪಟ್ಟಿ ತಯಾರಿಕೆ ಮತ್ತು ವಸತಿ ಗಣತಿ’ಯು ಜನಗಣತಿಯ ಮೊದಲ ಹಂತವಾಗಿದ್ದು, ವಿವಿಧ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ಸೆ.30ರವರೆಗೆ ಜನಗಣತಿ ನಡೆಯಲಿದೆ. ಈ ಪೈಕಿ ಕರ್ನಾಟಕದಲ್ಲಿ ಏ.16ರಿಂದ ಮೇ 15ರವರೆಗೆ ನಡೆಯುವ ಗಣತಿ ಕಾರ್ಯಕ್ಕೆ ಸುಮಾರು 2 ಲಕ್ಷಕ್ಕೂ ಹೆಚ್ಚು ಗಣತಿದಾರರನ್ನು ನಿಯೋಜಿಸಲಾಗಿದೆ.

ಎಲ್ಲಾ 31 ಜಿಲ್ಲೆಗಳಲ್ಲೂ ಆಯಾ ಜಿಲ್ಲಾಡಳಿತಗಳ ಮೂಲಕ ಗಣತಿ ಕಾರ್ಯ ನಡೆಯಲಿದೆ. ಗಣತಿದಾರರು ಈ ಸಮಯದಲ್ಲಿ ಮನೆಗಳ ಸ್ಥಿತಿಗತಿಗಳು, ಆಸ್ತಿಗಳು ಮತ್ತು ಮನೆಗಳ ಸೌಕರ್ಯಗಳಿಗೆ ಸಂಬಂಧಿಸಿದ ವಿವರಗಳನ್ನು ಕಲೆ ಹಾಕಲಿದ್ದಾರೆ. ಮೊದಲ ಹಂತದ ಜನಗಣತಿಗೆ 33 ಪ್ರಶ್ನೆಗಳನ್ನು ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಷ್ಟೋ ಜನರಿಗೆ ನಾವು ನಮ್ಮ ಪರ್ಸನಲ್‌ ಡೀಟೇಲ್ಸ್‌ನ್ನು ಯಾಕೆ ನೀಡಬೇಕು ಎನ್ನುವ ಸಂದೇಹ ಇರುತ್ತದೆ. ಆದರೆ ಈ ದತ್ತಾಂಶ ಇನ್ನೆಲ್ಲಿಯೂ ಬಳಕೆ ಆಗೋದಿಲ್ಲ. ಯಾವುದೇ ಸಂಸ್ಥೆ ಜೊತೆ ಹಂಚಿಕೊಳ್ಳುವುದಿಲ್ಲ. ಡೇಟಾ ಸೇಫ್‌ ಆಗಿ ಇರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !