ಗಜಪಡೆ ಜೊತೆ ಯುವಕರ ಸೆಲ್ಫಿ ಹುಚ್ಚಾಟದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಷ್ಟೇ ಅನಾಹುತಗಳಾದರೂ ಮನಷ್ಯರಿಗೆ ಸೆಲ್ಫಿ ಹುಚ್ಚು ಮಾತ್ರ ಕಡಿಮೆಯಾಗುವುದಿಲ್ಲ. ಡೇಂಜರ್‌ ಅಂತ ಗೊತ್ತಿದ್ರೂ ಹರಸಾಹಸ ಪಟ್ಟು ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಾರೆ. ಈ ವಿಡಿಯೋದಲ್ಲಾದದ್ದೂ ಅದೇ. ಸುಪ್ರಿಯಾ ಸಾಹು ಎಂಬ ಐಎಎಸ್‌ ಅಧಿಕಾರಿ ಹಂಚಿಕೊಂಡಿರುವ ವಿಡಿಯೋದಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಗಜಪಡೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವಕರು ಮುಂದಾಗಿದ್ದಾರೆ.

ವನ್ಯಜೀವಿಗಳೊಂದಿಗೆ ಆಟ ಪ್ರಾಣಸಂಕಟಕ್ಕೆ ದಾರಿ ಎಂದು ಗೊತ್ತಿದ್ದರೂ ಯುವಕರು ಕೈ ಹಾಕಿದ್ದಾರೆ. ಅದರಲ್ಲಿ ಈ ಹುಡಗರು ಬಹಳ ಅದೃಷ್ಟವಂತರು. ಆನೆಗಳ ಹಿಂಡು ಏನೂ ಮಾಡಲಿಲ್ಲ. ಇವರನ್ನು ಕ್ಷಮಿಸಿ ಬಿಟ್ಟಿವೆ ಇಲ್ಲವಾದಲ್ಲಿ ಆನೆಗಳು ಈ ಹುಡುಗರನ್ನು ಇರುವೆಯಂತೆ ಹೊಸಕಿಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!