ಕಾಮನ್‌ ವೆಲ್ತ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರಿಕೆಟ್‌ ತಂಡಕ್ಕೆ ಬೆಳ್ಳಿ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತೀಯ ವನಿತೆಯರ ಕ್ರಿಕೆಟ್‌ ತಂಡವು ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದೆ. ಫೈನಲ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಿದ ಭಾರತ ತಂಡವು 9 ರನ್‌ ಗಳ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

ಇಂಗ್ಲೆಂಡಿನ ಬರ್ಮಿಂಗ್‌ ಹ್ಯಾಮ್ ನಲ್ಲಿ ನಡೆಯುತ್ತಿರು ಕಾಮನ್‌ ವೆಲ್ತ್‌ ಗೇಮ್ಸ್‌ ನ ಕ್ರಿಕೆಟ್‌ ಸ್ಪರ್ಧೆಯ ಅಂತಿಮ ಪಂದ್ಯವು ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು. ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡವು 20 ಓವರ್‌ ಗಞಲಲ್ಲಿ 8ವಿಕೆಟ್‌ ನಷ್ಟಕ್ಕೆ 161 ರನ್‌ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 19.3 ಓವರ್‌ ನಲ್ಲಿ 152 ರನ್‌ ಕಲೆ ಹಾಕಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ಭಾರತದ ಆಟಗಾರ್ತಿ ಹರ್ಮನ್‌ ಪ್ರೀತ್‌ ಕೌರ್‌ ಬಿರುಸಿನ ಅರ್ಧಶತಕ (65) ಬಾರಿಸಿದರೂ ಉಳಿದ ಆಟಗಾರರು ಸಮರ್ಥವಾಗಿ ಬೆಂಬಲಿಸಲು ವಿಫಲರಾದ ಕಾರಣ ಭಾರತ ಸೋಲೊಪ್ಪಬೇಕಾಯಿತು. ಆಸ್ಟ್ರೇಲಿಯಾವು 9 ರನ್‌ ಗಳ ಅಂತರದಲ್ಲಿ ಪಂದ್ಯದಲ್ಲಿ ಜಯಗಳಿಸಿ ಸ್ವರ್ಣಪದಕ ಪಡೆದುಕೊಂಡರೆ ಭಾರತ ಬೆಳ್ಳಿ ಪದಕಕ್ಕೇ ತೃಪ್ತಿ ಪಡಬೇಕಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!