ಸೆಮಿಕಂಡಕ್ಟರ್‌ ಕೊರತೆ: ಉತ್ಪಾದನೆಯಲ್ಲಿ ವಿಳಂಬ ಅನುಭವಿಸುತ್ತಿದೆ ಮಾರುತಿ ಸುಜುಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಪೂರೈಕೆ ವ್ಯತ್ಯಯವಾಗುತ್ತಿದ್ದು ಇದು ದೇಶದ ಅತಿದೊಡ್ಡ ಕಾರು ತಯಾರಕನಾದ ಮಾರುತಿ ಸುಜುಕಿಯ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ʼಸೆಮಿಕಂಡಕ್ಟರ್‌ ಗಳ ಸರಬರಾಜು ಇನ್ನೂ ಅನಿರೀಕ್ಷಿತವಾಗಿಯೇ ಉಳಿದಿರುವುದು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿದೆʼ ಎಂದು ಕಂಪನಿಯ ಸಿಎಫ್‌ಒ ಅಜಯ್ ಸೇಥ್ ಹೇಳಿದ್ದಾರೆ ಎಂದು ಲೈವ್‌ ಮಿಂಟ್‌ ವರದಿ ಮಾಡಿದೆ.

“ಎಲೆಕ್ಟ್ರಾನಿಕ್ ಘಟಕಗಳ ಸೀಮಿತ ಲಭ್ಯತೆಯು ನಮ್ಮ ಉತ್ಪಾದನೆಯನ್ನು ಯೋಜಿಸುವಲ್ಲಿ ಒಂದು ಸವಾಲಾಗಿದೆ. ಎಲೆಕ್ಟ್ರಾನಿಕ್ ಘಟಕಗಳ ಕೊರತೆಯು ಇನ್ನೂ ನಮ್ಮ ಉತ್ಪಾದನೆಯ ಪ್ರಮಾಣವನ್ನು ಮಿತಿಗೊಳಿಸುತ್ತಿದೆ.” ಎಂದು ಅವರು ಹೇಳಿದ್ದಾರೆ.

2022 ರ ಮೂರನೇ ತ್ರೈಮಾಸಿಕದ ಕೊನೆಯಲ್ಲಿ ಕಂಪನಿಯ ಬಾಕಿ ಉಳಿದಿರುವ ಗ್ರಾಹಕರ ಆರ್ಡರ್‌ಗಳು ಸುಮಾರು 3.63 ಲಕ್ಷ ಯೂನಿಟ್‌ಗಳಿಗೆ ಏರಿಕೆಯಾಗಿದೆ.

ಎಲೆಕ್ಟ್ರಾನಿಕ್ ಘಟಕಗಳ ಪೂರೈಕೆಯ ಪರಿಸ್ಥಿತಿಯು ಅನಿರೀಕ್ಷಿತವಾಗಿ ಉಳಿದಿದೆ ಎಂದಿರುವ ಅವರು, “ನಮ್ಮ ಪೂರೈಕೆ ಸರಪಳಿ, ಎಂಜಿನಿಯರಿಂಗ್, ಉತ್ಪಾದನೆ ಮತ್ತು ಮಾರಾಟ ತಂಡಗಳು ಲಭ್ಯವಿರುವ ಅರೆವಾಹಕಗಳಿಂದ ಉತ್ಪಾದನೆಯ ಪ್ರಮಾಣವನ್ನು ಗರಿಷ್ಠಗೊಳಿಸಲು ಕೆಲಸ ಮಾಡುತ್ತಿವೆ.” ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!