“ನಿನ್ನ ಹೆಂಡತಿಯ ಕಳಿಸಿಕೊಡು”- ದಂಪತಿಯ ಆತ್ಮಹತ್ಯೆಗೆ ಕಾರಣವಾದ ತೆಲಂಗಾಣದ ಶಾಸಕನ ಪುತ್ರನ ಕೃತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣ ರಾಷ್ಟ್ರ ಸಮಿತಿ ಶಾಸಕ ವನಮಾ ವೆಂಕಟೇಶ್ವರ ರಾವ್ ಪುತ್ರ ರಾಘವೇಂದ್ರ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಮಕೃಷ್ಣನ್ ಎಂಬಾತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ವಿಡಿಯೋದಲ್ಲಿ ತನ್ನ ಸಾವಿಗೆ ಶಾಸಕರ ಪುತ್ರ ಕಾರಣ ಎಂದು ಆರೋಪಿಸಿದ್ದಾರೆ. ಹಣಕಾಸಿನ ವಿವಾದ ಬಗೆಹರಿಸಲು ತನ್ನ ಪತ್ನಿಯನ್ನು ಹೈದರಾಬಾದ್‌ಗೆ ಕಳಿಸಿ ಎಂದು ರಾಘವೇಂದ್ರ ಒತ್ತಾಯಿಸಿದ್ದರು ಎಂದು ರಾಮಕೃಷ್ಣನ್ ಆರೋಪಿಸಿದ್ದಾರೆ.

ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ಹಾಗೂ ಸಂಸದ ರೇವಂತ್ ರೆಡ್ಡಿ ರಾಘವೇಂದ್ರ ಬಂಧನಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ್ದು, ರಾಮಕೃಷ್ಣನ್ ಪತ್ನಿಯನ್ನು ತನ್ನ ಬಳಿಗೆ ಕಳಿಸಿ ಎಂದು ರಾಘವೇಂದ್ರ ಪೀಡಿಸುತ್ತಿದ್ದ. ಕುಟುಂಬದ ಜೊತೆ ರಾಮಕೃಷ್ಣನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಅವರು ಮಾಡಿದ ವಿಡಿಯೋ ನೋಡಿದರೆ ಇವರ ದೌರ್ಜನ್ಯ ಎಂಥದ್ದು ಎಂದು ಅರ್ಥವಾಗುತ್ತದೆ. ಕೂಡಲೇ ಇವರನ್ನು ಬಂಧಿಸಿ ಹಾಗೂ ಪಕ್ಷದಿಂದ ಅಮಾನತುಗೊಳಿಸಿ ಎಂದು ಆಗ್ರಹಿಸಿದ್ದಾರೆ.

 

ಆರೋಪಿ ರಾಘವೇಂದ್ರ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಭದ್ರಾದ್ರಿ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ದತ್ ಹೇಳಿದ್ದಾರೆ. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಸ್ಥಳೀಯ ಪಿಂಕ್ ಪಕ್ಷದ ನಾಯಕ ರಾಘವೇಂದ್ರ ರಾವ್ ಅವರನ್ನು ಪೊಲೀಸರು ಆರೋಪಿ ಎಂದು ಪಟ್ಟಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!