ಹಿರಿಯ ವಕೀಲ, ಎಐಎಂಪಿಎಲ್​​​ಬಿ ಕಾರ್ಯದರ್ಶಿ ಜಫರ್ಯಾಬ್ ಜಿಲಾನಿ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಿರಿಯ ವಕೀಲ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ(AIMPLB) ಕಾರ್ಯದರ್ಶಿ ಜಫರ್ಯಾಬ್ ಜಿಲಾನಿ ಬುಧವಾರ ಲಕ್ನೋದ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಿಗ್ಗೆ 11.50ರ ಸುಮಾರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಜಿಲಾನಿ ಅವರ ಮಗ ನಜಮ್ ಜಫರ್ಯಾಬ್ ಹೇಳಿದ್ದಾರೆ.

ಬಾಬರಿ ಮಸೀದಿ ಪ್ರಕರಣದಲ್ಲಿ ವಕೀಲರಾಗಿದ್ದ ಜಿಲಾನಿ ಅವರು ಉತ್ತರ ಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿದ್ದರು. ಬುಧವಾರ ಸಂಜೆ ಲಕ್ನೋದ ಐಶ್‌ಬಾಗ್ ಸ್ಮಶಾನದಲ್ಲಿ ತಂದೆಯ ಅಂತ್ಯಕ್ರಿಯೆ ನಡೆಯಲಿದೆ ಎಂದು ನಜಮ್ ಹೇಳಿದ್ದಾರೆ.

ಜಿಲಾನಿ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!