ಸಿಎಂ ಕಾರ್ಯಕ್ರಮದಲ್ಲಿ ಏಕಾಏಕಿ ವೇದಿಕೆ ಮೇಲೆ ಮಗುವನ್ನು ಎಸೆದ ತಂದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮದಲ್ಲಿ ಏಕಾಏಕಿ ತಂದೆಯೊಬ್ಬ ತನ್ನ ಒಂದು ವರ್ಷದ ಮಗುವನ್ನು ವೇದಿಕೆ ಮೇಲೆ ಎಸೆದಿದ್ದಾನೆ.

ಹೌದು, ಸಹಜ್‌ಪುರ ನಿವಾಸಿ ಮುಖೇಶ್ ಪಟೇಲ್ ಹಾಗೂ ನೇಹಾ ದಂಪತಿಯ ಒಂದು ವರ್ಷದ ಮಗಳಿಗೆ ಹೃದಯದಲ್ಲಿ ರಂಧ್ರವಿದೆ. ಈಗಾಗಲೇ ನಾಲ್ಕು ಲಕ್ಷ ಖರ್ಚು ಮಾಡಿದ್ದಾರೆ. ಆದರೆ ಆಪರೇಷನ್‌ಗೆ ಇನ್ನೂ ನಾಲ್ಕು ಲಕ್ಷ ಬೇಕಿದ್ದು, ಬಡ ದಂಪತಿಗೆ ಏನು ಮಾಡಬೇಕೋ ತಿಳಿದಿಲ್ಲ.

ಕಾರ್ಯಕ್ರಮಕ್ಕೆ ಬಂದು ಸಿಎಂ ಅವರನ್ನು ಭೇಟಿ ಮಾಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ಪೊಲೀಸರು ಅನುಮತಿ ನೀಡಿಲ್ಲ, ಸಿಎಂ ಗಮನ ಸೆಳೆಯಲು ಮುಖೇಶ್ ತನ್ನ ಮಗಳನ್ನು ಸ್ಟೇಜ್ ಮೇಲೆ ಎಸೆದಿದ್ದು, ಮಗು ಜೋರಾಗಿ ಅತ್ತಿದೆ. ತದನಂತರ ಮಗುವನ್ನು ತಾಯಿಗೆ ಹಿಂದಿರುಗಿಸಲಾಗಿದೆ.

ನಂತರ ಅಧಿಕಾರಿಗಳು ಸಿಎಂಗೆ ವಿಷಯ ತಲುಪಿಸಿದ್ದು, ಸಹಾಯ ಮಾಡವುದಾಗಿ ಭರವಸೆ ನೀಡಿದ್ದಾರೆ. ಅನಿವಾರ್ಯವಾಗಿ ಈ ರೀತಿ ಮಾಡಿದೆ, ವರ್ಷದ ಮಗುವನ್ನು ಆ ರೀತಿ ಎಸೆದಿದ್ದಕ್ಕೆ ನನಗೂ ನೋವಿದೆ ಎಂದು ಮುಖೇಶ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!