ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಹಾವೇರಿಯ ಹಿರಿಯ ಪತ್ರಕರ್ತ ಜಿ.ಎಂ. ಕುಲಕರ್ಣಿ(56) ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಉದಯ ಟಿವಿ ಮತ್ತು ಕನ್ನಡ ಪ್ರಭ ದಿನಪತ್ರಿಕೆ ಕುಲಕರ್ಣಿ ಅವರು ಸೇವೆ ಸಲ್ಲಿಸಿದ್ದಾರೆ. ಅವರು ಜವನ ಸಂಕಲನವನ್ನು ರಚಿಸಿದ್ದು ಗಮನಾರ್ಹ. ಅವರ ಸಾವಿನ ಸುದ್ದಿ ನನಗೆ ವೈಯಕ್ತಿಕವಾಗಿ ಬಹಳ ದುಃಖ ಉಂಟು ಮಾಡಿದೆ.
ದೇವರು ಕುಲಕರ್ಣಿ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಕಂಬನಿ ಮಿಡಿದಿದ್ದಾರೆ.
ಇಂದು ಮುಂಜಾನೆ ಹೃದಯದಲ್ಲಿ ನೋವು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಹಾವೇರಿ ನಗರದ ಮುಕ್ತಿದಾಮ ಸಂಜೆ ಅಂತ್ಯಕ್ರಿಯೆ ನಡೆಯಿತು.
ಜಿ.ಎಂ.ಕುಲಕರ್ಣಿ ಅವರು ಕತ್ತಲಲ್ಲಿ ಕಾಲಿ ತಟ್ಟೆ ಹಿಡಿದವರು ಎಂಬ ಕವನ ಸಂಕಲನ ಬರೆದಿದ್ದರು. ಜೊತೆಗೆ ಸಿಂಚನ ಪ್ರಕಾಶನ ಹೊಂದಿದ್ದರು. ಅಲ್ಲದೇ ಮಾಧ್ಯಮ ಲೋಕದಲ್ಲಿ ಜಿ.ಎಂ. ಕುಲಕರ್ಣಿ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಚಲಿತದಲ್ಲಿತ್ತು. ಪತ್ರಿಕೋದ್ಯಮ ವೃತ್ತಿಯನ್ನು ಕನ್ನಡಪ್ರಭ ಹಾಗೂ ಉದಯ ಟಿವಿಯಲ್ಲಿ ಕಳೆದರು.