ರಾಹುಲ್ ದ್ವಯರ ತಂಡಕ್ಕೆ ವೈಟ್ ವಾಶ್: ಏಕದಿನ ಸರಣಿ ಗೆದ್ದ ದಕ್ಷಿಣ ಆಫ್ರಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿದಕ್ಷಿಣ ಆಫ್ರಿಕಾ 4 ರನ್ ಗಳ ಗೆಲುವು ಸಾಧಿಸಿದೆ.
ದಕ್ಷಿಣ ಆಫ್ರಿಕಾ ನೀಡಿದ್ದ 288 ರನ್ ಗಳ ಗುರಿಯನ್ನು ಬೆನ್ನತ್ತಿದ್ದ ಟೀಮ್ ಇಂಡಿಯಾ ಅರಂಭದಲ್ಲಿ ನಾಯಕ ರಾಹುಲ್ ವಿಕೆಟ್ ಕಳೆದುಕೊಂಡಿತ್ತು. ಬಳಿಕ ಒಂದಾದ ಧವನ್- ಕೊಹ್ಲಿ ಇಂಡಿಯಾಕ್ಕೆ ಆಸರೆಯಾದರು.
ಧವನ್ 61 ರನ್ ಗಳಿಸಿದರೆ, ಕೊಹ್ಲಿ 65 ರನ್ ಗಳಿಸಿ ಔಟಾದರು. ಈ ವೇಳೆ ಬಂದ ಪಂತ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಅಯ್ಯರ್ 26, ಸೂರ್ಯಕುಮಾರ್ ಯಾದವ್ 39 ರನ್ ಗಳಿಸಿ ನಿರ್ಗಮಿಸಿದರು. ಈ ವೇಳೆ ತಂಡಕ್ಕೆ ಗೆಲುವಿನ ಮರುಜೀವ ಕೊಟ್ಟ ದೀಪಕ್ ಚಹರ್ 54 ತಂಡ ಗೆಲುವಿನ ತಂಡ ತಲುಪುವ ವೇಳೆ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ಆಟಗಾರರು ಗೆಲುವಿಗೆ ಶ್ರಮಿಸಿದರು. ಕೊನೆ ಹಂತದಲ್ಲಿ ಭಾರತ 4 ರನ್ ಗೆ ಸೋಲುಕಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!