ಹಿರಿಯ ವಕೀಲ ಹರೀಶ್‌ ಸಾಳ್ವೆಗೆ 68ನೇ ವರ್ಷದಲ್ಲಿ 3ನೇ ಮದುವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಖ್ಯಾತ ವಕೀಲ ಹರೀಶ್ ಸಾಳ್ವೆ 68ನೇ ವಯಸ್ಸಿನಲ್ಲಿ 3ನೇ ಮದುವೆಯಾಗಿದ್ದಾರೆ.

ಭಾರತದ ಮಾಜಿ ಸಾಲಿಸಿಟರ್ ಜನರಲ್ ಕೂಡ ಆಗಿರುವ ಖ್ಯಾತ ವಕೀಲ ಹರೀಶ್ ಸಾಳ್ವೆ 68ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದು, ಟ್ರಿನಾ ಎನ್ನುವವರೊಂದಿಗೆ ಸಾಳ್ವೆ ಲಂಡನ್ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.

ಇವರ ಮದುವೆಯ ವಿಡಿಯೊ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಳ್ವೆ ಅವರ ಮದುವೆಗೆ ನೀತಾ ಅಂಬಾನಿ, ಗೋಪಿ ಹಿಂದುಜಾ ಲಲಿತ್ ಮೋದಿ, ಉಜ್ವಲ್ ರಾವತ್ ಸೇರಿ ಹಲವರು ಭಾಗಿಯಾಗಿದ್ದರು ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಸಾಳ್ವೆ ಅವರು 1982ರಲ್ಲಿ ಮೀನಾಕ್ಷಿ ಎಂಬವವರನ್ನು ಮದುವೆಯಾಗಿ 2020ರಲ್ಲಿ ವಿಚ್ಛೇದನ ನೀಡಿದ್ದರು. 2020ರಲ್ಲಿ ಕಾರೋಲಿನ್ ಬ್ರೊಸಾರ್ಡ್ ಎನ್ನುವವರನ್ನು ಮದುವೆಯಾಗಿದ್ದರು. ಇದೀಗ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಸಾಳ್ವೆ ಕಾಲಿರಿಸಿದ್ದಾರೆ.

ಕುಲಭೂಷಣ್ ಜಾಧವ್ ಪ್ರಕರಣ ಸೇರಿ ಹಲವು ಉನ್ನತ ಮಟ್ಟದ ಪ್ರಕರಣಗಳಲ್ಲಿ ಸಾಳ್ವೆ ವಕೀಲರಾಗಿದ್ದರು.

ಜಾಧವ್ ಪ್ರಕರಣದಲ್ಲಿವಾದ ಮಾಡಿದ ಕಾರಣಕ್ಕೆ ಅಂದಿನ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್‌, ಹರೀಶ್‌ ಸಾಳ್ವೆ ಅವರಿಗೆ ಶುಲ್ಕ ನೀಡಲು ಬಂದಾಗ ಭಾರತ ಸರ್ಕಾರದಿಂದ ಕೇವಲ 1 ರೂಪಾಯಿ ಶುಲ್ಕವನ್ನು ಇವರು ಪಡೆದಿದ್ದರು.ಅವರ ಈ ವರ್ತನೆಗೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗಿದ್ದವು. ಅಂದಿನಿಂದ ಹರೀಶ್‌ ಸಾಳ್ವೆ ಹೆಸರು ಸಾಕಷ್ಟು ಜನಪ್ರಿಯವಾಗಿದೆ.

2015ರಲ್ಲಿ ಹರಿಶ್ ಸಾಳ್ವೆ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಸಾಳ್ವೆ ಅವರು ನವೆಂಬರ್ 1999 ರಿಂದ ನವೆಂಬರ್ 2002 ರವರೆಗೆ ಭಾರತದ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!