ಹಿರಿಯ ಕವಿ ಚನ್ನವೀರ ಕಣವಿ ನಿಧನಕ್ಕೆ ಸುತ್ತೂರು ಶ್ರೀಗಳಿಂದ ಸಂತಾಪ

ಹೊಸದಿಗಂತ ವರದಿ, ಮೈಸೂರು:

ಖ್ಯಾತ ಕವಿ, ವಿಮರ್ಶಕ ಡಾ. ಚನ್ನವೀರ ಕಣವಿಯವರು ವಿಧಿವಶರಾದುದು ವಿಷಾದನೀಯ ಸಂಗತಿ ಎಂದು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ನವೋದಯ ಸಾಹಿತ್ಯಯುಗದ ಸಮನ್ವಯ ಕವಿಗಳಲ್ಲೊಬ್ಬರಾದ ಡಾ. ಚನ್ನವೀರ ಕಣವಿಯವರ ಕಾವ್ಯ ಲಾಲಿತ್ಯ, ಮಾಧುರ್ಯ ಮತ್ತು ಜೀವನಪ್ರೀತಿಯ ದ್ಯೋತಕವಾಗಿದೆ. ಅಕ್ಷರಲೋಕದ ಈ ಅಜಾತಶತ್ರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ಅಭೂತಪೂರ್ವ ಸೇವೆ ಸಲ್ಲಿಸಿದ್ದರು. ಚಿರಂತನ ದಾಹ, ನೆಲಮುಗಿಲು, ಹೂವು ಹೊರಳುವುದು ಸೂರ್ಯನ ಕಡೆಗೆ ಮುಂತಾದ ಕವನ ಸಂಕಲನಗಳಿAದ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಹೇಳಿದ್ದಾರೆ.
ವಿಮರ್ಶೆ, ಪ್ರಬಂಧ, ಶಿಶುಸಾಹಿತ್ಯ, ಸಂಪಾದನೆ ಮುಂತಾದ 45ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. “ಸುನೀತ” ಸಾಹಿತ್ಯ ಪ್ರಕಾರದಲ್ಲಿ ಅನನ್ಯವಾದ ಸಾಧನೆ ಮಾಡಿದ್ದರು. ಇವರ “ಜೀವಧ್ವನಿ” ಕೃತಿಗೆ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪುರಸ್ಕಾರ ಲಭಿಸಿದೆ. ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪುರಸ್ಕಾರ, ಗೌರವ ಡಾಕ್ಟರೇಟ್, ಬಸವಗುರುಕಾರುಣ್ಯ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದರು. ಹಾಸನದಲ್ಲಿ ನಡೆದ 65ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರ ನಿಧನದಿಂದ ಕನ್ನಡ ಸಾಹಿತ್ಯದ ಹಿರಿಯ ಚೇತನವೊಂದು ಅಸ್ತಂಗತವಾದAತಿದೆ.
ದಿವAಗತರ ಆತ್ಮಕ್ಕೆ ಶಾಂತಿಯನ್ನು ಮತ್ತು ಅವರ ಕುಟುಂಬವರ್ಗದವರಿಗೆ, ಬಂಧುಬಾAಧವರಿಗೆ ಮತ್ತು ಸಾಹಿತ್ಯಾಭಿಮಾನಿಗಳಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಹಾರೈಸುತ್ತೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!