ನಾಡೋಜ ಚನ್ನವೀರ ಕಣವಿ ಎಚ್. ಡಿ. ಚೌಡಯ್ಯ ನಿಧನಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ

ಹೊಸದಿಗಂತ ವರದಿ, ಮೈಸೂರು:

ನಾಡೋಜ ಚನ್ನವೀರ ಕಣವಿ ಹಾಗೂ ಮಾಜಿ ಶಾಸಕ ಎಚ್.ಡಿ.ಚೌಡಯ್ಯರ ನಿಧನಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಚನ್ನವೀರ ಕಣವಿ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿ ಕಳಚಿದಂತಾಗಿದೆ.
ಅನೇಕ ಕವನಸಂಕಲನಗಳನ್ನು ರಚಿಸಿ, ಜನಸಾಮಾನ್ಯರಿಗೆ ಸರಳವಾಗಿ ಕಾವ್ಯದ ರುಚಿ ಉಣಬಡಿಸಿದ ಚೆಂಬೆಳಕಿನ ಕವಿಯಾಗಿದ್ದ ಚನ್ನವೀರ ಕಣವಿ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡದ ಸಮನ್ವಯ ಕವಿ ಎಂದೇ ಪ್ರಸಿದ್ಧರಾಗಿದ್ದ ಚನ್ನವೀರ ಕಣವಿ ಅವರು ಕಾವಾಕ್ಷಿ, ಆಕಾಶಬುಟ್ಟಿ, ಮಧುಚಂದ್ರ, ಹೊಂಬೆಳಕು…ಹೀಗೆ ಹಲವಾರು ಕಾವ್ಯಸಂಕಲನಗಳು, ವಿಮರ್ಶಾಲೇಖನಗಳು, ಮಕ್ಕಳ ಕವಿತೆ ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು.
ನಾಡೋಜ, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವರ ಸಾಧನೆಗೆ ಸಿಕ್ಕ ಗೌರವಗಳಾಗಿವೆ. ಕಣವಿ ಅವರ ಕುಟುಂಬ, ಅಭಿಮಾನಿಗಳು, ಶಿಷ್ಯಕೋಟಿಗೆ ದುಃಖಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದಿದ್ದಾರೆ.
ಹಿರಿಯ ರಾಜಕಾರಣಿಯನ್ನು ಕಳೆದುಕೊಂಡAತಾಗಿದೆ;
ಆಡಳಿತದಲ್ಲಿ ದಕ್ಷತೆ, ಶಿಸ್ತು, ಬದ್ದತೆ ರೂಢಿಸಿಕೊಂಡೇ ರಾಜಕಾರಣ ಮತ್ತು ಸಾಮಾಜಿಕ ಸೇವೆ ಮಾಡಿದ ಮಂಡ್ಯದ ಜನತಾ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರು, ಶಿಕ್ಷಣ ತಜ್ಞರು ಹಿರಿಯ ಮುತ್ಸದ್ಧಿ ಹಿರಿಯ ಸಹಕಾರಿ ಧುರಿಣರು ಆದ ಎಚ್. ಡಿ. ಚೌಡಯ್ಯರವರ ನಿಧನವು ಸಮಾಜವು ಹಿರಿಯ ರಾಜಕಾರಣಿಯನ್ನು ಕಳೆದುಕೊಂಡAತಾಗಿದೆ. ರಾಜ್ಯದ ಜನಪರ ಚಿಂತನೆ, ಕಾಳಜಿ ಹೊಂದಿದ್ದ ಹಿರಿಯ ನಾಯಕ ಚೌಡಯ್ಯರವರು ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನಪರಿಷತ್‌ನ ಸದಸ್ಯರಾಗಿ ಮಂಡ್ಯದ ತೂಬಿನಕೆರೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಘಟಕವನ್ನು ಸ್ಥಾಪಿಸಲು ಪ್ರಮುಖ ಪಾತ್ರವನ್ನು ವಹಿಸಿದ್ದರು. ಶಿಕ್ಷಣ ಕ್ಷೇತ್ರ, ಕ್ರೀಡೆ, ರಂಗಭೂಮಿ ಕ್ಷೇತ್ರ ಸೇರಿ ಗ್ರಾಮೀಣ ಪ್ರದೇಶದ ನಾಟಕಗಳಿಗೆ ಪ್ರೋತ್ಸಾಹ ನೀಡಿ ಸೈ ಎನಿಸಿಕೊಂಡಿದ್ದ ಶ್ರೀ ಹೆಚ್. ಡಿ. ಚೌಡಯ್ಯನವರು ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಶ್ರೀಯುತರ ನಿಧನಕ್ಕೆ ನನ್ನ ಅತೀವ ಸಂತಾಪ ಸೂಚಿಸುತ್ತಾ, ಅವರ ನಿಧನದಿಂದ ಪತ್ನಿ, ಮಕ್ಕಳು ಮತ್ತು ಕುಟುಂಬ ವರ್ಗದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!