September 23, 2026
Wednesday, September 23, 2026
spot_img

ಇಡಗುಂಜಿ ದೇವಸ್ಥಾನದ ಹಿರಿಯ ಶಹನಾಯ್ ವಾದಕ ಗಜಾನನ ಸುಬ್ರಾಯ ಭಂಡಾರಿ ವಿಧಿವಶ

ಹೊಸದಿಗಂತ ವರದಿ ಹೊನ್ನಾವರ:

ಹೊನ್ನಾವರ ತಾಲೂಕಿನ ಇಡಗುಂಜಿಯ ಪ್ರಸಿದ್ದ ಶಹನಾಯ್ ವಾದಕ ಗಜಾನನ ಸುಬ್ರಾಯ ಭಂಡಾರಿ (85) ಮಂಗಳವಾರ ನಿಧನರಾದರು.

ಅವರು ಇಡಗುಂಜಿ ಶ್ರೀ ಮಹಾಗಣಪತಿ ದೇವಾಲಯದಲ್ಲಿ ತ್ರಿಕಾಲ ಪೂಜೆಯಲ್ಲಿ ಶಹನಾಯ್ ವಾದನವನ್ನು ಬಾಲ್ಯದಿಂದಲೇ ನಡೆಸುತ್ತಾ ಬಂದವರು.‌ನಿರಂತರ 45 ವರ್ಷಗಳ ಕಾಲ ಅಭ್ಯಾಸವನ್ನು ಮಾಡಿ ರಾಗ ಸಂಯೋಜಿತ ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ಶಹನಾಯ್ ವಾದಕರಾಗಿ ಪ್ರೌಢಿಮೆ ಸಾಧಿಸಿದ್ದರು.

ನಾಡಿನ ಪ್ರಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ,  ಉತ್ಸವಗಳಲ್ಲಿ ಶಹನಾಯ್ ನುಡಿಸಿ ಜನರ ಮನಗೆದ್ದವರಾಗಿದ್ದರು. ಅಲ್ಲದೆ 2023 ನೇ ಇಸವಿಯಲ್ಲಿ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.

ಇವರು ಹೆಂಡತಿ, ಓರ್ವ ಪುತ್ರ, ಇಬ್ಬರು ಹೆಣ್ಣು ಮಕ್ಕಳು , ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !