180.14 ಪಾಯಿಂಟ್‌ ಕುಸಿದ ಸೆನ್ಸೆಕ್ಸ್‌: ಹೇಗಿದೆ ಷೇರುಪೇಟೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತೈಲ ಬೆಲೆಗಳ ಏರಿಕೆಯ ನಂತರ ಭಾರತೀಯ ಷೇರು ಮಾರುಕಟ್ಟೆಗಳು ಮಂಗಳವಾರ ಬೆಳಿಗ್ಗೆ ನೀರಸವಾಗಿ ಪ್ರಾರಂಭವಾಗಿದ್ದು 09:16 ಕ್ಕೆ, ಸೆನ್ಸೆಕ್ಸ್ 180.14 ಪಾಯಿಂಟ್ ಅಥವಾ 0.33 ಶೇಕಡಾ 54341.01 ಕ್ಕೆ ಇಳಿದಿದೆ. ನಿಫ್ಟಿ 51.60 ಪಾಯಿಂಟ್ ಅಥವಾ 0.32 ರಷ್ಟು ಕುಸಿದು 16226.90 ಕ್ಕೆ ತಲುಪಿದೆ.

ಟಾಪ್ ಗೇನರ್ಸ್‌ & ಟಾಪ್‌ ಲೂಸರ್ಸ್:‌

ಟಾಟಾ ಸ್ಟೀಲ್, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಎನ್‌ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್, ಪವರ್‌ಗ್ರಿಡ್ ಮತ್ತು ಡಾ ರೆಡ್ಡೀಸ್ ಸೆನ್ಸೆಕ್ಸ್‌ನಲ್ಲಿ ಬೆರಳೆಣಿಕೆಯಷ್ಟು ಲಾಭ ಗಳಿಸಿವೆ.

ಎಚ್‌ಸಿಎಲ್ ಟೆಕ್, ಏಷ್ಯನ್ ಪೇಂಟ್ಸ್, ಟೆಕ್ ಎಂ, ಟಿಸಿಎಸ್, ಇನ್‌ಫಿ, ಬಜಾಜ್ ಫೈನಾನ್ಸ್, ವಿಪ್ರೋ, ಎಲ್ & ಟಿ ಮತ್ತು ಎಚ್‌ಯುಎಲ್ ಶೇ 1.5 ರಷ್ಟು ಇಳಿಕೆ ಕಂಡಿವೆ.

ವಿಶಾಲವಾದ ಮಾರುಕಟ್ಟೆಗಳು ಹಸಿರು ಬಣ್ಣದಲ್ಲಿ ತೆರೆದಿದ್ದು ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.14 ರಷ್ಟು ಹೆಚ್ಚಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!