ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಚ್ಚರಾ, ಸೈಬೀರಿಯಾದಿಂದ ಹೊಸ ಮಾರಣಾಂತಿಕ ವೈರಸ್ ದಾಳಿ ನಡೆಯಲಿದೆ, ಅನ್ಯಲೋಕದ ಆಕ್ರಮಣವೂ ಆಗಲಿದೆ. ಭಾರತ ಮಿಡತೆ ದಾಳಿಯ ಆಪತ್ತು ಎದುರಿಸಲಿದೆ…
ಇದು ಬಲ್ಗೇರಿಯಾದ ಕುರುಡು ಬಾಬಾ ವಂಗಾ ಈ ವರ್ಷಕ್ಕೆ ನುಡಿದಿರುವ ಭವಿಷ್ಯ.
ವಂಗಾ ಸಾವನ್ನಪ್ಪಿ ವರ್ಷಗಳೇ ಉರುಳಿವೆ. ಆದರೆ ಅದಕ್ಕೂ ಮುನ್ನ ಆಕೆ ನುಡಿದಿರುವ ಭವಿಷ್ಯವಾಣಿಗಳು ಅಂದಿನಿಂದ ಇಂದಿನವರೆಗೂ ನಿಜವಾಗುತ್ತಾ ಬಂದಿವೆ. ರಾಜಕುಮಾರಿ ಡಯಾನಾ ಸಾವು, 2017ರ ಬ್ರೆಕ್ಸಿಟ್, ಚೆರ್ನೋಬಿಲ್ ದುರಂತ, 9/11ರ ಭಯೋತ್ಪಾದಕ ದಾಳಿ, ಸೋವಿಯತ್ ವಿಸರ್ಜನೆ, 2004ರಲ್ಲಿ ಸಂಭವಿಸಿದ ಥಾಯ್‌ಲ್ಯಾಂಡ್ ಸುನಾಮಿ, ಬರಾಕ್ ಒಬಾಮಾ ಅಧ್ಯಕ್ಷತೆ ಬಗ್ಗೆ ಆಕೆ ನುಡಿದಿದ್ದ ಭವಿಷ್ಯ ಶೇ. 85ರಷ್ಟು ನಿಜವೇ ಆಗಿತ್ತು. ಹೀಗಾಗಿ ಆಕೆಯ ಭವಿಷ್ಯವಾಣಿಯನ್ನು ಪೂರ್ತಿಯಾಗಿ ತಳ್ಳಿಹಾಕುವಂತಿಲ್ಲ!
ಕಕ್ಷೆ ಬದಲಿಸುತ್ತದೆ ಭೂಮಿ!
ಇನ್ನೊಂದು ಅಚ್ಚರಿಯ ಅಂಶವೆಂದರೆ 2023ರಲ್ಲಿ ಭೂಮಿ ತನ್ನ ಕಕ್ಷೆ ಬದಲಿಸಿಕೊಳ್ಳುತ್ತದೆ ಎಂದಿರುವ ಆಕೆ 2028ರಲ್ಲಿ ಶುಕ್ರ ಗ್ರಹಕ್ಕೆ ಗಗನಯಾತ್ರಿಗಳು ಪ್ರಯಾಣಿಸಲಿದ್ದಾರೆ ಎಂದೂ ಹೇಳಿದ್ದಾಳೆ. 2046ರಲ್ಲಿ ಅಂಗಾಂಗ ಕಸಿ ತಂತ್ರಜ್ಞಾನದಿಂದಾಗಿ ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ. 2100 ರಲ್ಲಿ ರಾತ್ರಿಯು ಕಣ್ಮರೆಯಾಗುತ್ತದೆ, ಕೃತಕ ಸೂರ್ಯನ ಬೆಳಕು ಭೂಮಿಯ ಇನ್ನೊಂದು ಭಾಗವನ್ನು ಬೆಳಗಿಸುತ್ತದೆ ಎಂದೂ ಆಕೆ ಭವಿಷ್ಯ ನುಡಿದಿದ್ದಾರೆ.
ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೇ ಖ್ಯಾತರಾಗಿರುವ ಬಾಬಾ ವಂಗಾ, ತನ್ನ 12ನೇ ವಯಸ್ಸಿನಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡಿದ್ದರು. 1996 ರಲ್ಲಿ ಸ್ತನ ಕ್ಯಾನ್ಸರ್‌ನಿಂದ ಬಾಬಾ ವಂಗಾ ಸಾವನ್ನಪ್ಪಿದ್ದರು. ಜೀವಿತಾವಧಿಯಲ್ಲಿ ಮುಂದಿನ 5076 ರವರೆಗಿನ ಭವಿಷ್ಯವಾಣಿಯನ್ನು ವಂಗಾ ನುಡಿದಿದ್ದಾರೆ.