400 ಪಾಯಿಂಟ್‌ ಕುಸಿದ ಸೆನ್ಸೆಕ್ಸ್:‌ 17 ಸಾವಿರಕ್ಕಿಂತಲೂ ಕೆಳಮಟ್ಟದಲ್ಲಿದೆ ನಿಫ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಈಕ್ವಿಟಿ ಮಾರುಕಟ್ಟೆಗಳು ಕೆಳಮಟ್ಟದಲ್ಲಿ ಪ್ರಾರಂಭವಾಗಿವೆ. ಎನ್‌ಎಸ್‌ಇ ನಿಫ್ಟಿ 50ಯು 129.10 ಅಂಕಗಳು ಅಥವಾ 0.75 ಶೇಕಡಾ ಕುಸಿದು 16,970.95 ಅಂಕಗಳಿಗೆ ಕುಸಿದಿದೆ. ಬಿಎಸ್‌ಇ ಸೆನ್ಸೆಕ್ಸ್ 449 ಅಂಕಗಳು ಅಥವಾ 0.77 ಶೇಕಡಾ ಕುಸಿದು 57,540.90 ಅಂಕಗಳಿಗೆ ತಲುಪಿದೆ.

ಬ್ಯಾಂಕ್ ನಿಫ್ಟಿ 305.95 ಅಂಕಗಳು ಅಥವಾ 0.77 ಶೇಕಡಾದಷ್ಟು ಕುಸಿದು 39,292.15 ಅಂಕಗಳಿಗೆ ತಲುಪಿದೆ. ನಿಫ್ಟಿ 50 ಯಲ್ಲಿ ಡಾ ರೆಡ್ಡಿ, ಡಿವಿಸ್ ಲ್ಯಾಬ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್‌ಯುಎಲ್), ಟೈಟಾನ್ ಮತ್ತು ಬಿಪಿಸಿಎಲ್ ಟಾಪ್ ಗೇನರ್ ಆಗಿದ್ದರೆ, ಅದಾನಿ ಎಂಟರ್‌ಪ್ರೈಸಸ್, ಹಿಂಡಾಲ್ಕೊ, ಇನ್ಫೋಸಿಸ್, ಟಿಸಿಎಸ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಟಾಪ್‌ ಲೂಸರ್‌ ಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!