ಭಾರತದ ಇಂಧನ ರಫ್ತುಗಳ ಮೇಲಿನ ನಿರ್ಬಂಧ ವಿಸ್ತರಿಸೋಕೆ ಚಿಂತಿಸುತ್ತಿದೆ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶೀಯ ಮಾರುಕಟ್ಟೆಗೆ ಸಂಸ್ಕರಿತ ಇಂಧನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಈ ತಿಂಗಳಲ್ಲಿ ಅಂತ್ಯಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದ ನಂತರವೂ ಡೀಸೇಲ್‌ ಹಾಗು ಗ್ಯಾಸೋಲೀನ್‌ ರಫ್ತಿನ ಮೇಲಿನ ನಿರ್ಬಂಧಗಳನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಸುದ್ದಿ ಸಂಸ್ಥೆ ರಾಯೀಟರ್ಸ್‌ ವರದಿ ಮಾಡಿದೆ.

ಈ ನಿರ್ಬಂಧ ವಿಸ್ತರಣೆಯು ರಷ್ಯಾದ ತೈಲ ಖರೀದಿಸಿ ಪಾಶ್ಚಾತ್ಯ ದೇಶಗಳಿಗೆ ರಫ್ತು ಮಾಡುವ ಭಾರತೀಯ ತೈಲ ಸಂಸ್ಕರಣಾ ಕಂಪನಿಗಳಿಗೆ ನಿರಾಸೆಯುಂಟು ಮಾಡಬಹುದು ಎನ್ನಲಾಗಿದೆ. ಉಕ್ರೇನ್‌ ಮೇಲೆ ರಷ್ಯಾವು ಆಕ್ರಮಣ ಮಾಡಿದ ಪರಿಣಾಮ ಪಾಶ್ಚಾತ್ಯ ದೇಶಗಳು ರಷ್ಯಾ ತೈಲ ನಿರ್ಬಂಧಿಸಿವೆ. ಹೀಗಾಗಿ ಭಾರತವು ಈ ಪರಿಸ್ಥಿತಿಯ ಲಾಭ ಪಡೆದು ರಷ್ಯಾ ತೈಲವನ್ನು ಖರೀದಿಸಿ ಅದನ್ನು ಸಂಸ್ಕರಿಸಿ ಯುರೋಪ್‌ ದೇಶಗಳಿಗೆ ರಫ್ತು ಮಾಡುತ್ತಿವೆ. ಪ್ರಸ್ತುತ ತೈಲ ರಫ್ತಿನ ಮೇಲಿನ ನಿರ್ಬಂಧ ವಿಸ್ತರಣೆಯು ಈ ತೈಲ ಕಂಪನಿಗಳಿಗೆ ನಿರುತ್ಸಾಹಗೊಳಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಭಾರತವು ವರ್ಷಗಳಿಂದ ಸಂಸ್ಕರಿಸಿದ ಉತ್ಪನ್ನಗಳ ನಿವ್ವಳ ರಫ್ತುದಾರನಾಗಿದ್ದು, ಕಳೆದ ವರ್ಷದ ಮಧ್ಯಭಾಗದಿಂದ ಆಗ್ನೇಯ ಏಷ್ಯಾದಿಂದ ತನ್ನ ರಫ್ತುಗಳನ್ನು ಪಾಶ್ಚಿಮಾತ್ಯ ಮಾರುಕಟ್ಟೆಗಳ ಕಡೆಗೆ ಸ್ಥಳಾಂತರಿಸಿದೆ. ಪಾಶ್ಚಾತ್ಯ ಮಾರುಕಟ್ಟೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಂಸ್ಕರಿಸಿದ ತೈಲ ರಫ್ತು ಏರಿಕೆ ದಾಖಲಿಸಿದೆ. ಆದರೆ ಪ್ರಸ್ತುತ ದೇಶೀಯ ತೈಲ ಲಭ್ಯತೆಯನ್ನು ಬಲಪಡಿಸಿ, ದೇಶದಲ್ಲಿ ತೈಲ ಕೊರತೆ ಉಂಟಾಗದಂತೆ ಮಾಡಲು ಸರ್ಕಾರ ಈ ಕ್ರಮಕ್ಕೆ ಚಿಂತಿಸುತ್ತಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!