500 ಪಾಯಿಂಟ್‌ ಜಿಗಿದ ಸೆನ್ಸೆಕ್ಸ್:‌ ಇಂದಿನ ಷೇರ್‌ ಮಾರ್ಕೆಟ್‌ ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಭಾವನೆಗಳ ನಡುವೆ ಶುಕ್ರವಾರ ದೇಶೀಯ ಸೂಚ್ಯಂಕಗಳು ಉನ್ನತ ಮಟ್ಟದಲ್ಲಿ ತೆರೆದಿವೆ. NSE ನಿಫ್ಟಿ 50ಯು 128.90 ಅಂಕಗಳು ಅಥವಾ 0.76 ಶೇಕಡಾದಷ್ಟು ಏರಿಕೆಯಾಗಿ 17,114.50 ಅಂಕಗಳಿಗೆ ತಲುಪಿದೆ. BSE ಸೆನ್ಸೆಕ್ಸ್ 500 ಪಾಯಿಂಟ್ಸ್ ಅಥವಾ 0.71 ಶೇಕಡಾ ಗಗನಕ್ಕೇರಿದ್ದು 58,044.88 ಕ್ಕೆ ತಲುಪಿದೆ. ಬ್ಯಾಂಕ್ ನಿಫ್ಟಿ 297.70 ಅಂಕಗಳು ಅಥವಾ 0.76 ಶೇಕಡಾ 39,430.30 ಕ್ಕೆ ಏರಿತು.

ನಿಫ್ಟಿ 50 ಯಲ್ಲಿ ಅದಾನಿ ಎಂಟರ್‌ಪ್ರೈಸಸ್, ಎಚ್‌ಡಿಎಫ್‌ಸಿ ಲೈಫ್, ಇನ್ಫೋಸಿಸ್, ಟಾಟಾ ಮೋಟಾರ್ಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಟಾಪ್ ಗೇನರ್‌ಗಳಾಗಿವೆ. ಹೀರೊಮೊಟೊಕಾರ್ಪ್, ಬಿಪಿಸಿಎಲ್, ಐಚರ್ ಮೋಟಾರ್ಸ್, ಭಾರ್ತಿ ಏರ್‌ಟೆಲ್ ಮತ್ತು ಟಿಸಿಎಸ್ ಟಾಪ್‌ ಲೂಸರ್‌ ಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!