ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತೋಹಾರಿ ವಹಿವಾಟು ನಡೆದಿದ್ದು, ವಾರಾಂತ್ಯದ ದಿನ ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆಯ ಏರಿಕೆ ಕಂಡಿವೆ.
ನಿನ್ನೆ 83,603.04 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು 1,359.52 ಅಂಕಗಳ ಏರಿಕೆಯೊಂದಿಗೆ 84,544.31 ಅಂಕಗಳಿಗೆ ಏರಿ ಮೊದಲ ಬಾರಿಗೆ 84 ಸಾವಿರ ಗಡಿದಾಟಿ ದಾಖಲೆ ಬರೆದಿದೆ. ಅಂತೆಯೇ ನಿಫ್ಟಿಕೂಡ ದಿನದ ವಹಿವಾಟು ಅಂತ್ಯಕ್ಕೆ 375.15 ಅಂಶಗಳ ಏರಿಕೆಕಂಡು 25,790.95 ಅಂಕಗಳಿಗೆ ಏರಿಕೆಯಾಗಿದೆ.
ನಿಫ್ಟಿ ಮತ್ತು ಸೆನ್ಸೆಕ್ಸ್ ಎರಡೂ ಷೇರು ಸೂಚ್ಯಂಕಗಳು ಇಂದು ಒಂದೇ ದಿನ ಶೇ.1ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿ ದಾಖಲೆ ಬರೆದಿದೆ.
ಇಂದಿನ ವಹಿವಾಟಿನಲ್ಲಿ ಷೇರುಮಾರುಕಟ್ಟೆ ಮಾತ್ರವಲ್ಲದೇ ಭಾರತೀಯ ರೂಪಾಯಿ ಮೌಲ್ಯದಲ್ಲೂ ಏರಿಕೆ ಕಂಡುಬಂದಿದ್ದು, ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆಯಷ್ಟು ಏರಿಕೆಯಾಗಿ ಪ್ರತೀ ಡಾಲರ್ ಗೆ 83.57ರೂಗಳಷ್ಟಾಗಿದೆ.
ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರು ಬರೊಬ್ಬರಿ 6 ಲಕ್ಷ ರೂ ಲಾಭಾಂಶ ಗಳಿಸಿದ್ದು, ಬಿಎಸ್ ಇ ಪಟ್ಟಿ ಮಾಡಲಾದ ಹೂಡಿಕೆಯ ಮೌಲ್ಯ 466 ಲಕ್ಷ ಕೋಟಿಯಿಂದ 472 ಲಕ್ಷ ಕೋಟಿಗೆ ಏರಿಕೆಯಾಗಿದೆ.