ಮಂಗಳೂರು-ಮೂಡಬಿದ್ರಿ ಹೆದ್ದಾರಿಯಲ್ಲಿ ಸರಣಿ ಅಪಘಾತ: ಮೂವರಿಗೆ ಗಾಯ, 7 ವಾಹನಗಳು ಜಖo

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ 169 ರ ಎಡಪದವಿನಲ್ಲಿ ಶುಕ್ರವಾರ ಅಪರಾಹ್ನ ನಡೆದ ಸರಣಿ ಅಪಘಾತದಲ್ಲಿ ಒಂದು ಲಾರಿ, ಟ್ಯಾಂಕರ್ ಮತ್ತು ಖಾಸಗಿ ಬಸ್ಸು ಸಹಿತ ಏಳು ವಾಹನಗಳು ಪುಡಿ ಪುಡಿಯಾಗಿವೆ.

ಮಂಗಳೂರು ಕಡೆಯಿಂದ ಆವೆ ಮಣ್ಣು ತುಂಬಿಕೊಂಡು ಮೂಡಬಿದ್ರಿಯತ್ತ ಸಾಗುತ್ತಿದ್ದ ಆಂಧ್ರ ಮೂಲದ ಬ್ರಹತ್ ಲಾರಿಯೊಂದು ಬ್ರೇಕ್ ವೈಫಲ್ಯದಿಂದಾಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಎಡಪದವು ರಾಮ ಮಂದಿರದ ಬಳಿ ನಿಂತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಪಲ್ಟಿಯಾಗಿ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದೆ. ಬಳಿಕ ರಸ್ತೆ ಪಕ್ಕದ ಕಟ್ಟಡ ಮತ್ತು ಒಂದು ಎಟಿಎಂ ಗೆ ಗುದ್ದಿ, ಮಂಗಳೂರಿನತ್ತ ಸಾಗುತ್ತಿದ್ದ ಅಡುಗೆ ಎಣ್ಣೆ ತುಂಬಿದ್ದ ಟೆಂಪೋ, ಮೂಡಬಿದ್ರಿ ಕಡೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಖಾಸಗಿ ಬಸ್ಸು, ಒಂದು ಸ್ವಿಫ್ಟ್ ಕಾರು ಮತ್ತು ಮೂರು ಬೈಕ್ ಗಳಿಗೆ ಗುದ್ದಿದ ಲಾರಿ ಎಡಪದವು ಜಂಕ್ಷನ್ ನಲ್ಲಿ ಚರಂಡಿಯಲ್ಲಿ ವಾಳಿಕೊಂಡು ನಿಂತಿದೆ.

ಟ್ಯಾಂಕರ್ ಚಾಲಕ ಸಹಿತ ಮೂವರಿಗೆ ಗಂಭೀರ ಗಾಯಗಳಾಗಿದ್ದು,, ಆಸ್ಪತ್ರೆಗೆ ದಾಖಳಿಸಲಾಗಿದೆ.

ಅಡುಗೆ ಎಣ್ಣೆ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋದಲ್ಲಿದ್ದ ಅಡುಗೆ ಎಣ್ಣೆ ಪ್ಯಾಕೆಟ್ ಗಳು ರಸ್ತೆಯಲ್ಲಿ ಚದುರಿ ಬಿದ್ದಿದ್ದವು. ರಸ್ತೆ ಬದಿಯ ಕಟ್ಟಡದಲ್ಲಿದ್ದ ಅಗರಿ ಶೋ ರೂಮ್ ಮತ್ತು ಎಟಿಎಂ ಜಖoಗೊಂಡಿವೆ.

ಅಪಘಾತಕ್ಕೆ ಕಾರಣವಾದ ಲಾರಿಯ ಚಾಲಕನನ್ನು ಹರಸಾಹಸಪಟ್ಟು ಹೊರತೆಗೆಯಲಾಯಿತು. ಮೂರು ಬೈಕ್ ಗಳು ಲಾರಿಯಡಿ ಸಿಲುಕಿ ನಜ್ಜುಗುಜ್ಜಾಗಿವೆ. ಎಟಿಎಂ ಬಳಿ ಸಣ್ಣ ಹೂವಿನ ಅಂಗಡಿಯಿದ್ದು ಅದ್ರಷ್ಟಾವಶಾತ್ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ರಸ್ತೆಯಲ್ಲಿದ್ದ ವಾಹನಗಳನ್ನು ಬಜಪೆ ಪೊಲೀಸರು ತೆರವುಗೊಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!