ಕೇರಳದಲ್ಲಿ ಸರಣಿ ಸ್ಫೋಟ: ಪೊಲೀಸರಿಗೆ ಶರಣಾದ ಓರ್ವ ವ್ಯಕ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌‌

ಕೇರಳದ ಎರ್ನಾಕುಲಂನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಕೊಚ್ಚಿಯ ವ್ಯಕ್ತಿಯೊಬ್ಬ ಸ್ಫೋಟದ ಹೊಣೆ ಹೊತ್ತು ಪೊಲೀಸರಿಗೆ ಶರಣಾಗಿದ್ದಾನೆ.

ಈ ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 37 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಬೆಳಗ್ಗೆ ಕ್ರಿಶ್ಚಿಯನ್ನರ ಸಭೆಯೊಂದರ ಸಮಯದಲ್ಲಿ ಟಿಫಿನ್​ ಬಾಕ್ಸ್​ನಿಂದ ಮೊದಲ ಸ್ಫೋಟ ಸಂಭವಿಸಿತ್ತು.

ಮೀನಹಿಲೆ ಎಂಬ ಕೊಚ್ಚಿಯ ವ್ಯಕ್ತಿ ಕನ್ವೆನ್​ಷನ್​ ಸೆಂಟರ್​ನಲ್ಲಿ ಬಾಂಬ್ ಇಟ್ಟಿರುವುದಾಗಿ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ವ್ಯಕ್ತಿಯನ್ನು ಕೊಚ್ಚಿಯಿಂದ ಕರೆದೊಯ್ದಿದ್ದಾರೆ, ಆತ ಯಾವುದಾದರೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಕೇರಳದ ಎರ್ನಾಕುಲಂನ ಕ್ರಿಶ್ಚಿಯನ್ ಧಾರ್ಮಿಕ ಸಭೆಯೊಂದರಲ್ಲಿ ಸರಣಿ ಸ್ಫೋಟ ಸಂಭವಿಸಿದೆ. ಕನ್ವೆನ್​ಷನ್ ಸೆಂಟರ್​ ಒಳಗೆ ಟಿಫಿನ್​ ಬಾಕ್ಸ್​ನಲ್ಲಿ ಸ್ಫೋಟಕಗಳಿತ್ತು, ಬೆಳಗ್ಗೆ 9.40ಕ್ಕೆ ಮೊದಲ ಸ್ಫೋಟ ಸಂಭವಿಸಿದೆ ಎನ್ನುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!