Monday, December 4, 2023

Latest Posts

ಸರ್ದಾರ್ ವಲ್ಲಭಭಾಯಿ ಪಟೇಲ್​ ಜಯಂತಿಯಂದು ‘ಮೇರಾ ಯುವ ಭಾರತ್​’​ ವೆಬ್​ಸೈಟ್​ಗೆ ಚಾಲನೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌‌

ದೇಶದ ಮೊದಲ ಉಪ ಪ್ರಧಾನಿ ಸರ್ದಾರ್​ ವಲ್ಲಭಭಾಯ್​ ಪಟೇಲ್‌ ಅವರ​ ಜನ್ಮ ದಿನವಾದ ಅಕ್ಟೋಬರ್​ 31ರಂದು ‘ಮೇರಾ ಯುವ ಭಾರತ್’ ವೆಬ್‌ಸೈಟ್‌ಗೆ ಚಾಲನೆ ನೀಡಲಾಗುತ್ತದೆ. ಇದು ರಾಷ್ಟ್ರ ನಿರ್ಮಾಣದ ವಿವಿಧ ಕಾರ್ಯಕ್ರಮಗಳಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು ಪ್ರಸಾರಗೊಂಡ ‘ಮನ್​ ಕಿ ಬಾತ್​’​ ರೇಡಿಯೋ ಕಾರ್ಯಕ್ರಮದ 106ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ”ಅಕ್ಟೋಬರ್​ 31ರಂದು ಮೇರಾ ಯುವ ಭಾರತ್​ ವೆಬ್​ಸೈಟ್‌ಗೆ ಚಾಲನೆ ನೀಡಲಾಗುತ್ತದೆ. ಯುವಕರು MYBharat.Gov.in.ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದು ರಾಷ್ಟ್ರ ನಿರ್ಮಾಣದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಯುವಕರಿಗೆ ಅವಕಾಶ ನೀಡಲಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಯುವ ಶಕ್ತಿಯನ್ನು ಸಂಯೋಜಿಸುವ ವಿಶಿಷ್ಟ ಪ್ರಯತ್ನ” ಎಂದು ತಿಳಿಸಿದರು.

ಅ.31ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ಎಂದು ಉಲ್ಲೇಖಿಸಿದ ಅವರು, ಇಂದಿರಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಬಳಿಕ ದೇಶಾದ್ಯಂತ ಕಳೆದ ಎರಡೂವರೆ ವರ್ಷಗಳಿಂದ ನಡೆಯುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವವು ಅಕ್ಟೋಬರ್ 31ರಂದು ಮುಕ್ತಾಯವಾಗಲಿದೆ ಎಂದು ಅವರು ಹೇಳಿದರು.

ಪ್ರತಿ ಬಾರಿಯಂತೆ ಈ ಬಾರಿಯೂ ಹಬ್ಬ ಹರಿದಿನಗಳಲ್ಲಿ ‘ಲೋಕಲ್ ಫಾರ್ ವೋಕಲ್’ಗೆ ಆದ್ಯತೆ ನೀಡಬೇಕು. ಪ್ರವಾಸೋದ್ಯಮ ಅಥವಾ ತೀರ್ಥಯಾತ್ರೆಗೆ ಹೋದಲ್ಲೆಲ್ಲಾ ಸ್ಥಳೀಯ ಕುಶಲಕರ್ಮಿಗಳಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಬೇಕು. ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದರಿಂದ ಕುಶಲಕರ್ಮಿಗಳಿಗೆ ಮುಂಬರುವ ದೀಪಾವಳಿಗೆ ಬೆಳಕಾಗಬೇಕು. ನಮ್ಮ ಕನಸು ‘ಆತ್ಮನಿರ್ಭರ ಭಾರತ’. ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ. ವೋಲಕ್ ಫಾರ್ ಲೋಕಲ್ ಜತೆ, ಆತ್ಮನಿರ್ಭರ ಭಾರತವು ಕೂಡ ಮುಖ್ಯ , ಹಾಗೆಯೇ ಏನೇ ಖರೀದಿ ಮಾಡಿದರೂ ಹಣವನ್ನು ಯುಪಿಐ ಮೂಲಕವೇ ನೀಡಿ ಎಂದು ಸಲಹೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!