ವಿಜಯಪುರದಲ್ಲಿ ಸರಣಿ ಕಳ್ಳತನ; 5 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಕಳ್ಳರು ಪರಾರಿ

ಹೊಸದಿಗಂತ ವರದಿ, ವಿಜಯಪುರ:
ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ಚಿನ್ನದಂಗಡಿ, ಮನೆಯಲ್ಲಿ ಸರಣಿ ಕಳ್ಳತನ ನಡೆಸಿರುವ ಘಟನೆ ವರದಿಯಾಗಿದೆ.
ಇಲ್ಲಿನ ರಾಜು ಪತ್ತಾರ ಎಂಬವರ ಚಿನ್ನಾಭರಣದ ಅಂಗಡಿಗೆ ನುಗ್ಗಿದ ಕಳ್ಳರು, ಅಂಗಡಿಯಲ್ಲಿದ್ದ 40 ಸಾವಿರ ನಗದು ಸೇರಿ ಅಂದಾಜು 5 ಲಕ್ಷ ರೂ.ಗಳ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾರೆ‌. ಅಲ್ಲದೆ ಸದಾಶಿವ ಸಿಂಗೆ ಎಂಬವರ ಮನೆಯಲ್ಲಿನ ತಿಜೋರಿ ಬೀಗ ಮುರಿದ ಕಳ್ಳರು 8 ಸಾವಿರ ರೂ. ನಗದನ್ನು ಕಳ್ಳರು ಕಳ್ಳತನ ಮಾಡಿದ್ದು, ಬಳಿಕ ಜಾಕೀರ್ ಎಂಬವರ ಬಳೆ ಅಂಗಡಿಗೆ ನುಗ್ಗಿ ಬೀಗ ಮುರಿದು ನಗದು ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಚಡಚಣ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!