Wednesday, June 29, 2022

Latest Posts

ಸರಣಿ ಕ್ಲೀನ್​ ಸ್ವೀಪ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ತಂಡದ ಲಯಬದ್ಧ ಬೌಲಿಂಗ್ ದಾಳಿಯಿಂದ ಶ್ರೀಲಂಕಾ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಸೋಲುಕಂಡಿದ್ದು, ಈ ಮೂಲಕ ರೋಹಿತ್ ಪಡೆ 238 ರನ್​ಗಳಿಂದ ಗೆಲುವು ಸಾಧಿಸಿ, ಸರಣಿಯನ್ನು 2-0ಯಲ್ಲಿ ಕ್ಲೀನ್​ ಸ್ವೀಪ್​ ಸಾಧಿಸಿದೆ.
ಭಾರತ ನೀಡಿದ್ದ 447 ರನ್​ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಕೇವಲ 208ರನ್​ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲಿ ಅನುಭವಿಸಿದೆ.
ನಾಯಕ ದಿಮುತ್ ಕರುಣರತ್ನೆ ಏಕಾಂಗಿ ಹೋರಾಟ ನಡೆಸಿ ವೃತ್ತಿ ಜೀವನದ 14ನೇ ಶತಕ ಸಿಡಿಸಿದರು. ಆದರೆ ಉಳಿದ ಆಟಗಾರರು ಬೃಹತ್ ಗುರಿಯನ್ನು ಬೆನ್ನತ್ತುವಲ್ಲಿ ತಂಡಕ್ಕೆ ಸಾಥ್ ನೀಡಲು ವಿಫಲವಾಗಿದೆ.
ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ 55ಕ್ಕೆ 4, ಜಸ್ಪ್ರೀತ್ ಬುಮ್ರಾ 23ಕ್ಕೆ3, ಅಕ್ಷರ್ ಪಟೇಲ್ 37ಕ್ಕೆ2, ಮತ್ತು ಜಡೇಜಾ 48ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 252 ರನ್​ಗಳಿಸಿದರೆ, ಇದಕ್ಕುತ್ತರವಾಗಿ ಶ್ರೀಲಂಕಾ 109ರನ್​ಗಳಿಸಿತ್ತು. 2ನೇ ಇನ್ನಿಂಗ್ಸ್​ನಲ್ಲಿ ಭಾರತ 303ರನ್​ಗಳಿಸಿ ಡಿಕ್ಲೇರ್ ಘೋಷಿಸಿ 447ರನ್​ಗಳ ಟಾರ್ಗೆಟ್​ ನೀಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss