ಇಂಡಿಗೋ ಏರ್ ಲೆನ್ಸ್ ನಲ್ಲಿ ಸರ್ವರ್ ಸಮಸ್ಯೆ: ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಪರದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಗೋ ಏರ್ ಲೆನ್ಸ್ ನಲ್ಲಿ ಸರ್ವರ್ ಸಮಸ್ಯೆಯಿಂದ ದೇಶಾದ್ಯಂತ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಸರ್ವರ್‌ ಸಮಸ್ಯೆಯಿಂದಾಗಿ ಚೆಕ್‌-ಇನ್‌ ಮತ್ತು ಚೆಕ್‌-ಔಟ್‌ ಆಗಲು ಪ್ರಯಾಣಿಕರು ಪರದಾಡಿದರು.

ಸರ್ವರ್‌ ಸಮಸ್ಯೆ ಕಾರಣಕ್ಕೆ ಕೆಂಪೇಗೌಡ ಏರ್ಪೋರ್ಟ್‌ನ ಟರ್ಮಿನಲ್ 1 ರಲ್ಲಿ ಪ್ರಯಾಣಿಕರು ಪರದಾಡಿದರು. ನೂರಾರು ಜನ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸಿದರು.

ಇಂಡಿಗೋದ ಟಿಕೆಟ್ ಬುಕಿಂಗ್ ಸರ್ವರ್ ಮಧ್ಯಾಹ್ನದಿಂದ ಪರಿಣಾಮ ಬೀರಿದೆ. ಮಧ್ಯಾಹ್ನ 1:05ಕ್ಕೆ ಕಾರ್ಯಾಚರಣೆಗಳು ಸಂಕ್ಷಿಪ್ತವಾಗಿ ಪುನರಾರಂಭಗೊಂಡಿವೆ. ಆದಾಗ್ಯೂ, ಸಿಸ್ಟಮ್‌ನಲ್ಲಿ ತೊಡಕಾಗುತ್ತಿದೆ. ಸಮಸ್ಯೆ ಪರಿಹರಿಸಲು, ಎಲ್ಲರಿಗೂ ಸಹಾಯ ಮಾಡಲು ಮತ್ತು ಸುಗಮ ಪ್ರಯಾಣ ಖಚಿತಪಡಿಸಿಕೊಳ್ಳಲು ನಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಏರ್ಲೈನ್ಸ್ ಹೇಳಿದೆ.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!