ತನ್ನ ಸಾವಿನ ದಿನ ನಿಗದಿ ಮಾಡಿ, ಜಗುಲಿ ಮೇಲೆ ಕೂತ ಅಜ್ಜಿ, ಇವರನ್ನು ನೋಡೋಕೆ ಮುಗಿಬಿದ್ದ ಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಖೇಡ್ಲಿ ಪಟ್ಟಣದಲ್ಲಿ ವೃದ್ಧೆಯೊಬ್ಬರು ತಮ್ಮ ಸಾವಿನ ದಿನ ತಾವೇ ನಿಗದಿ ಮಾಡಿಕೊಂಡು ಜಗುಲಿ ಮೇಲೆ ಕುಳಿತಿದ್ದಾರೆ.

ಕುಟುಂಬದವರಿಗೆ ತಾನು ಇಷ್ಟು ಹೊತ್ತಿಗೆ ಮೃತಪಡುತ್ತೇನೆ ಎಂದು ಹೇಳಿ, ಬೇರೇನೂ ಮಾತನಾಡದೆ ಎತ್ತರದ ಕಟ್ಟೆ ಮೇಲೆ ಹೋಗಿ ಕುಳಿತಿದ್ದಾರೆ. ಮನೆಯವರು ಎಷ್ಟು ಮನವೊಲಿಸಲು ಪ್ರಯತ್ನಿಸಿದರೂ ಅಜ್ಜಿ ಯಾರ ಮಾತಿಗೂ ಕಿವಿ ಕೊಟ್ಟಿಲ್ಲ. ವಿಷಯ ಊರಿಗೇ ಹಬ್ಬಿ, ಊರಿನವರೆಲ್ಲಾ ಪೂಜಾ ಸಾಮಾಗ್ರಿಗಳ ಸಮೇತ ಅಜ್ಜಿ ನೋಡಲು ಬಂದಿದ್ದಾರೆ.

ಕೆಲವರು ಅಜ್ಜಿ ಸುತ್ತಾಮುತ್ತ ಭಜನೆ ಮಾಡಲು ಆರಂಭಿಸಿದ್ದು, ಕಾಣಿಕೆ ಹಾಕಿದ್ದಾರೆ. ನಂತರ ಪೊಲೀಸರಿಗೆ ವಿಷಯ ತಿಳಿದಿದ್ದು, ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!