ಮತ್ತೆ ಲವಲವಿಕೆಯಿಂದಿರುವ ಸೂಪರ್ ಸ್ಟಾರ್ ಕುಟುಂಬ: ವೈರಲ್ ಆಗುತ್ತಿರುವ ಫೋಟೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ, ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಅವರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಇತ್ತೀಚೆಗಷ್ಟೇ ನಿಧನರಾದರು. ಅವರ ಸಾವಿನಿಂದ ಘಟ್ಟಮನೇನಿ ಕುಟುಂಬ ಸದಸ್ಯರು ತೀವ್ರ ದುಃಖತಪ್ತರಾಗಿದ್ದರು. ಮಹೇಶ್ ಬಾಬು ಮಗಳು ಸಿತಾರಾ ಅಂತು ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದರು.

ಕೆಲ ತಿಂಗಳುಗಳ ಅವಧಿಯಲ್ಲಿ ಅಣ್ಣ ಹಾಗೂ ಅಮ್ಮನನ್ನು ಕಳೆದುಕೊಂಡ ಮಹೇಶ್‌ ಬಾಬು ನೋವನ್ನು ನುಂಗಿಕೊಂಡಿದ್ದರು. ತಮ್ಮ ನೆಚ್ಚಿನ ನಾಯಕನ ಕುಟುಂಬವನ್ನು ಹಾಗೆ ನೋಡಲು ಸಾಧ್ಯವಾಗದ ಅಭಿಮಾನಿಗಳು ಆ ನೋವಿನಿಂದ ಬೇಗ ಹೊರಬರಲಿ ಎಂದು ಪ್ರಾರ್ಥಿಸಿದರು. ಅಭಿಮಾನಿಗಳ ನಿರೀಕ್ಷೆಯಂತೆ ಆ ಘಳಿಗೆ ಬಂದೇ ಬಿಟ್ಟಿದೆ.

ನಿನ್ನೆ ಇಂದಿರಾದೇವಿ ಅವರ ಪುಣ್ಯಸ್ಮರಣೆ ದಿನವನ್ನು ಆಯೋಜಿಸಲಾಗಿತ್ತು.. ಈ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರ ಜೊತೆಗೆ ಕುಟುಂಬಸ್ಥರೂ ಪಾಲ್ಗೊಂಡಿದ್ದರು. ಈ ಹಿನ್ನಲೆಯಲ್ಲಿ ಇಡೀ ಸೂಪರ್ ಸ್ಟಾರ್ ಕುಟುಂಬ ಸಂತಸದಿಂದಿರುವ ಫೋಟೋವೊಂದು ವೈರಲ್ ಆಗಿದೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಾಯಕ ಮತ್ತೊಮ್ಮೆ ಸಂತಸದಿಂದಿರುವುದನ್ನು ನೋಡಿ ಖುಷಿ ಪಟ್ಟಿದ್ದಾರೆ.

Super Star Mahesh Babu Family Pic

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!