June 23, 2026
Tuesday, June 23, 2026
spot_img

ತಮಿಳು ಸಿನಿಮಾಗಳಿಗೆ ಹೊಸ ಡಿಜಿಟಲ್ ವ್ಯವಸ್ಥೆ ಮಾಡ್ಸಿ: ಸಿಎಂ ವಿಜಯ್‌ಗೆ ಸೇತುಪತಿ ಸಲಹೆ ಕೊಟ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಭವಿಷ್ಯ ಕುರಿತು ಹೊಸ ಚರ್ಚೆ ಶುರುವಾಗಿದೆ.

ಹೌದು ನಟ ವಿಜಯ್ ಸೇತುಪತಿ ತಮಿಳುನಾಡು ಸರ್ಕಾರವೇ ಸ್ವಂತ ಒಟಿಟಿ ವೇದಿಕೆಯನ್ನು ಆರಂಭಿಸುವ ಕುರಿತು ಚಿಂತನೆ ನಡೆಸಬೇಕು ಎಂದು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಮನವಿ ಮಾಡಿದ್ದಾರೆ. ಈ ಹೇಳಿಕೆ ಈಗ ಸಿನಿ ವಲಯದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ.

ಒಟಿಟಿ ಮಂದಗತಿಯ ನಡುವೆ ಹೊಸ ಪ್ರಸ್ತಾಪ

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಜಯ್ ಸೇತುಪತಿ, ದೊಡ್ಡ ಒಟಿಟಿ ಕಂಪನಿಗಳು ಈಗ ಹಿಂದಿನಂತೆ ಭಾರೀ ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ ಎಂದು ಹೇಳಿದರು. ಚಂದಾದಾರರ ಸಂಖ್ಯೆ ಕುಂಠಿತವಾಗುತ್ತಿರುವ ಕಾರಣ ಪ್ರಾದೇಶಿಕ ಚಿತ್ರರಂಗಗಳು ತಮ್ಮದೇ ಡಿಜಿಟಲ್ ವೇದಿಕೆ ನಿರ್ಮಿಸಿಕೊಳ್ಳುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಕಮಲ್ ಹಾಸನ್ ಆಲೋಚನೆಗೆ ಬೆಂಬಲ

ಹಿರಿಯ ನಟ ಕಮಲ್ ಹಾಸನ್ ಈ ಹಿಂದೆ ತಮಿಳು ಸಿನಿಮಾಗಳಿಗಾಗಿಯೇ ಪ್ರತ್ಯೇಕ ಒಟಿಟಿ ವೇದಿಕೆ ಬೇಕೆಂದು ಹೇಳಿದ್ದನ್ನು ನೆನಪಿಸಿಕೊಂಡ ವಿಜಯ್ ಸೇತುಪತಿ, ಸರ್ಕಾರದ ಬೆಂಬಲದೊಂದಿಗೆ ಬಂದರೆ ಸಣ್ಣ ನಿರ್ಮಾಪಕರಿಗೂ ದೊಡ್ಡ ಅವಕಾಶ ಸಿಗುತ್ತದೆ ಎಂದರು.

ಇದನ್ನೂ ಓದಿ:

ಸಣ್ಣ ಸಿನಿಮಾಗಳಿಗೆ ಹೊಸ ಆಶಾಕಿರಣ

ಬೃಹತ್ ಒಟಿಟಿ ವೇದಿಕೆಗಳಲ್ಲಿ ಅವಕಾಶ ಸಿಗದೆ ಹಿಂದುಳಿಯುವ ಸಣ್ಣ ಬಜೆಟ್ ಚಿತ್ರಗಳು ಮತ್ತು ಸ್ಥಳೀಯ ಕಥೆಗಳಿಗೆ ಸರ್ಕಾರಿ ಒಟಿಟಿ ಹೊಸ ವೇದಿಕೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ತಮಿಳು ಭಾಷೆ, ಸಂಸ್ಕೃತಿ ಮತ್ತು ಸ್ಥಳೀಯ ಪ್ರತಿಭೆಗಳಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !