ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ಪ್ರಾರ್ಥನೆಯ ವೇಳೆ ಚರ್ಚ್‌ನ ಮೇಲ್ಛಾವಣಿ ಕುಸಿದು ಏಳು ಜನರು ಸಾವನ್ನಪ್ಪಿರುವ ಘಟನೆ ಈಶಾನ್ಯ ಮೆಕ್ಸಿಕೋದಲ್ಲಿ ನಡೆದಿದೆ. ಕರಾವಳಿ ಪಟ್ಟಣವಾದ ಸಿಯುಡಾಡ್ ಮಡೆರೊದಲ್ಲಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 10 ಮಂದಿ ಗಾಯಗೊಂಡಿದ್ದಾರೆ ಸರ್ಕಾರದ ವಕ್ತಾರರು ಹೇಳಿದರು.
ನಾಗರಿಕ ರಕ್ಷಣಾ ಪಡೆಗಳು ಪರಿಹಾರ ಕೂಡಲೇ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಗವರ್ನರ್ ಅಮೇರಿಕಾ ವಿಲ್ಲಾರ್ರಿಯಲ್ ಹೇಳಿದ್ದಾರೆ. ಸಾಂತಾಕ್ರೂಜ್ ಪ್ಯಾರಿಷ್‌ನ ಅವಶೇಷಗಳಡಿಯಲ್ಲಿ 20 ಜನರು ಸಿಲುಕಿದ್ದರೆಂದು ಹೇಳಲಾಗಿದೆ.
ಕುಸಿದ ಕಟ್ಟಡದ ಅವಶೇಷಗಳಿಂದ ಧೂಳು ಮತ್ತು ಮಣ್ಣು ಹೊರಬರುತ್ತಿದೆ. ಅವಶೇಷಗಳ ಅಡಿಯಲ್ಲಿರುವ ಜನರನ್ನು ಉಳಿಸಲು ಇನ್ನೂ ಪ್ರಯತ್ನಗಳು ನಡೆಯುತ್ತಿವೆ.