July 28, 2026
Tuesday, July 28, 2026
spot_img

ಬಿಜೆಪಿ ಪಕ್ಷದ ಜೊತೆ ವಿಲೀನಕ್ಕೆ ರಾಘವ್ ಚಡ್ಡಾ ಸಹಿತ ಏಳು ಸಂಸದರಿಗೆ ಸಿಕ್ಕಿತು ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಏಳು ಮಂದಿ ರಾಜ್ಯಸಭಾ ಸಂಸದರನ್ನು ಪಕ್ಷದೊಂದಿಗೆ ವಿಲೀನಗೊಳಿಸಲು ರಾಜ್ಯಸಭಾ ಸಭಾಪತಿ ಸಿ. ಪಿ. ರಾಧಾಕೃಷ್ಣನ್ ಅವರು ಅನುಮತಿ ನೀಡಿದ್ದಾರೆ.

ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ವಿಕ್ರಮ್‌ಜಿತ್ ಸಿಂಗ್ ಸಹ್ನಿ ಹಾಗೂ ರಾಜಿಂದರ್ ಗುಪ್ತಾ ಬಿಜೆಪಿ ಸೇರ್ಪಡೆಯಾಗಿದ್ದರು.

ಇದರಿಂದ ರಾಜುಅಸಭೆಯಲ್ಲಿ ಆಪ್​ನ ಸಂಖ್ಯೆ ಮೂರಕ್ಕೆ ಕುಸಿದರೆ , ಬಿಜೆಪಿಯ ಬಲ 113ಕ್ಕೆ ಏರಿಕೆಯಾಗಿದೆ.

ಇತ್ತ ಏಳು ಸಂಸದರನ್ನು ಪಕ್ಷಾಂತರ ವಿರೋಧಿ ಕಾನೂನು ಅಡಿ ಅನರ್ಹಗೊಳಿಸುವಂತೆ ಕೋರಿ ರಾಜ್ಯಸಭಾ ಸಭಾಪತಿಗೆ ಆಪ್ ಅರ್ಜಿಯನ್ನು ಸಲ್ಲಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !