ರಷ್ಯಾದ ಶೆಲ್ ದಾಳಿಗೆ 23 ದಿನದ ಕಂದಮ್ಮ ಸೇರಿ ಏಳು ಮಂದಿ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಶೆಲ್ ದಾಳಿಗೆ ಉಕ್ರೇನ್‌ನಲ್ಲಿ 23 ದಿನದ ಕಂದಮ್ಮ, ಆಕೆಯ 12 ವರ್ಷದ ಸಹೋದರ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಗಂಭೀರ ಆರೋಪ ಮಾಡಿದೆ.

ಶೆಲ್ ದಾಳಿಗೆ ಇಡೀ ಕುಟುಂಬವೇ ನಿರ್ನಾಮವಾಗಿದೆ. ಪುಟ್ಟ ಮಗಳು ಸೋಫಿಯಾಗೆ ಬರೀ 23 ದಿನಗಳಾಗಿತ್ತಷ್ಟೇ. ಆತನ ಸಹೋದರನಿಗೆ ಬರೀ 12 ವರ್ಷ. ಇವರ ತಂದೆ ತಾಯಿ ಕೂಡ ಶೆಲ್ ದಾಳಿಯಿಂದ ಮೃತಪಟ್ಟಿದ್ದಾರೆ. ಘಟನಾ ಸ್ಥಳಗಳಲ್ಲಿ ಮೃತದೇಹಗಳನ್ನು ಕಂಡಾಗ ಕರುಳು ಕಿತ್ತುಬರುವಂತಹ ನೋವಾಗುತ್ತದೆ ಎಂದು ಖೆರ್ಸನ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಪ್ರೊಕುಡಿನ್ ಹೇಳಿದ್ದಾರೆ.

ಇನ್ನು ಸ್ಟಾನಿಸ್ಲಾವ್ ಗ್ರಾಮದಲ್ಲಿಯೂ ದಾಳಿ ನಡೆದಿದ್ದು, ಕ್ರಿಶ್ಚಿಯನ್ ಪಾದ್ರಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಉಕ್ರೇನ್ ಜನರ ಸುರಕ್ಷತೆಗೆ ಒತ್ತು ನೀಡಿದ್ದು, ಕುಪಿಯಾನ್ಸ್ಕ್ ಜಿಲ್ಲೆಯಲ್ಲಿ ಈಗಾಗಲೇ 111 ಜನರನ್ನು ಸ್ಥಳಾಂತರಿಸಲಾಗಿದೆ. ಸ್ಥಳಾಂತರಿಸಿದವರಿಗಾಗಿ ಉಚಿತ ವಸತಿ, ಆಹಾರ, ಮಾನವೀಯ ಹಾಗೂ ವೈದ್ಯಕೀಯ ನೆರವು ನೀಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!