ಆಕಾಶದಲ್ಲಿ ಅಪರೂಪದ ಘಟನೆ| 18ವರ್ಷಗಳ ಬಳಿಕ ಏಳು ಗ್ರಹಗಳ ಸಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

18 ವರ್ಷಗಳ ನಂತರ ಆಕಾಶದಲ್ಲಿ ಅಪರೂಪದ ಘಟನೆಯೊಂದು ಗತಿಸಲಿದೆ. ಏಳು ಗ್ರಹಗಳು ಇಂದು ಒಂದೇ ಸಾಲಿನಲ್ಲಿ ಕಾಣಸಿಗುತ್ತವೆ. ಜೂನ್ 24 ಶುಕ್ರವಾರದಂದು ಈ ಪವಾಡ ನಡೆಯಲಿದ್ದು, ಬುಧ, ಶುಕ್ರ, ಮಂಗಳ, ಗುರು, ಶನಿ, ನೆಪ್ಚೂನ್ ಮತ್ತು ಯುರೇನಸ್ ಗ್ರಹಗಳು ಒಂದೇ ಸಾಲಿನಲ್ಲಿ ಕಾಣಸಿಗುತ್ತವೆ.

ಈ ಏಳು ಗ್ರಹಗಳು ಜೂನ್ 24 ಮತ್ತು 27 ರ ನಡುವೆ ಸೂರ್ಯೋದಯಕ್ಕೆ ಅರ್ಧ ಗಂಟೆ ಮೊದಲು, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಐದು ಗ್ರಹಗಳು ಬರಿಗಣ್ಣಿಗೆ ಗೋಚರಿಸುತ್ತವೆ. ಆಕಾಶದಾದ್ಯಂತ, ಅವು ಪೂರ್ವದಿಂದ ದಕ್ಷಿಣಕ್ಕೆ ವಿಸ್ತರಿಸದಂತೆ ಭಾಸವಾಗುತ್ತದೆ ಆದರೆ  ವಾಸ್ತವವಾಗಿ ದಕ್ಷಿಣ ಮೂಲಕ ಉತ್ತರದಿಂದ ಪೂರ್ವಕ್ಕೆ ವಿಸ್ತರಿಸಿರುತ್ತವೆ.

ನೇರವಾಗಿ ನೋಡಿದಾಗ ಯುರೇನಸ್ ಮತ್ತು ನೆಪ್ಚೂನ್ ಕಾಣಿಸದೇ ಇರಬಹುದು. ಆದರೆ ಜೂನ್ 27 ರ ಹೊತ್ತಿಗೆ ಈ ಗ್ರಹಗಳನ್ನು ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್‌ನಂತಹ ಸಾಧನಗಳ ಸಹಾಯದಿಂದ ವೀಕ್ಷಿಸಬಹುದು. ಖಗೋಳಶಾಸ್ತ್ರಜ್ಞ ಕೆವಿನ್ ವಾಲ್ಷ್ ಈ ಅಪರೂಪದ ವ್ಯವಸ್ಥೆಯನ್ನು ಹೇಗೆ ವೀಕ್ಷಿಸಬಹುದು ಎಂದು ಸಲಹೆ ನೀಡಿದ್ದಾರೆ. ಜೂನ್ 24 ರಂದು ಸೂರ್ಯೋದಯಕ್ಕೆ 45 ನಿಮಿಷಗಳ ಮೊದಲು ನಾವು ಪೂರ್ವಕ್ಕೆ ನೋಡಿದರೆ, ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು ಎಂದಿದ್ದಾರೆ. ಈ ಅಪರೂಪದ ಸಂದರ್ಭ ಸೆಪ್ಟೆಂಬರ್ 2040 ರಲ್ಲಿ ಮತ್ತೆ ಕಾಣಿಸಿಕೊಳ್ಳಲಿದೆಯಂತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!