ದಾಲ್‌ ಸರೋವರದಲ್ಲಿ ಅಗ್ನಿ ಅವಘಡ, ಐದು ಹೌಸ್‌ಬೋಟ್‌ಗಳು ಸುಟ್ಟು ಭಸ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಾಲ್ ಸರೋವರದಲ್ಲಿ ಅಗ್ನಿ ಅವಘಡದಿಂದಾಗಿ ಕನಿಷ್ಠ ಐದು ಹೌಸ್ ಬೋಟ್‌ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಶ್ರೀನಗರದಲ್ಲಿ  ನಡೆದಿದೆ. ಘಾಟ್ ಸಂಖ್ಯೆ 9ರ ಸಮೀಪವಿರುವ ಹೌಸ್‌ಬೋಟ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಇತರ ಬೋಟ್‌ಗಳಿಗೂ ಹರಡಿ ಅವಾಂತರ ಸೃಷ್ಟಿಯಾಗಿತ್ತು.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸುವ ವೇಳೆಗೆ ಐದು ಹೌಸ್‌ಬೋಟ್‌ಗಳು ಸುಟ್ಟು ಭಸ್ಮವಾಗಿದ್ದವು ಎಂದು ಕಾಶ್ಮೀರ ರೀಡರ್ ವರದಿ ಮಾಡಿದೆ.

ಆಸ್ತಿ-ಪಾಸ್ತಿ ನಷ್ಟವಾಗಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಸ್ತುತ ಬೆಂಕಿಗೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!