ನೀರ್ಚಾಲಿನಲ್ಲಿ ಸೇವಾಭಾರತೀ ರಕ್ತದಾನ ಶಿಬಿರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸೇವಾಭಾರತೀ ನೀರ್ಚಾಲು ಘಟಕದ ವತಿಯಿಂದ ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಿತು.

ಕಾಸರಗೋಡು ಸರಕಾರಿ ಬ್ಲಡ್‌ಬ್ಯಾಂಕ್ ಸಹಯೋಗದೊಂದಿಗೆ ನಡೆದ ಶಿಬಿರವನ್ನು ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ, ಧಾರ್ಮಿಕ ಸಾಮಾಜಿಕ ಮುಂದಾಳು ಜಯದೇವ ಖಂಡಿಗೆ ಉದ್ಘಾಟಿಸಿದರು.
ಅವರು ಮಾತನಾಡಿ ಪ್ರಳಯಕಾಲದಲ್ಲಿಯೂ, ಕೋವಿಡ್ ಸಂದರ್ಭದಲ್ಲಿ ನಾಡಿನಾದ್ಯಂತ ಸೇವಾಕಾರ್ಯಗಳ ಮೂಲಕ ಸೇವಾಭಾರತಿ ಜನಸೇವೆಯಲ್ಲಿ ತೊಡಗಿಕೊಂಡಿದೆ. ಈ ನಿಟ್ಟಿನಲ್ಲಿ ನೀರ್ಚಾಲು ಸೇವಾ ಭಾರತೀ ಘಟಕವೂ ಹಿಂದೆ ಉಳಿದಿಲ್ಲ. ಮನೆ ರಿಪೇರಿ, ಬಡಜನತೆಯ ಚಿಕಿತ್ಸೆಗೆ ನೆರವು, ಶ್ರಮದಾನ ಮೊದಲಾದ ಕಾರ್ಯಗಳನ್ನು ನಿರಂತರ ಮಾಡುತ್ತಾ ಬಂದಿದೆ ಎಂದರು.

ಜಿಲ್ಲೆಯ ಆಸ್ಪತ್ರೆಯಲ್ಲಿ ರಕ್ತದ ಪೂರೈಕೆಗಾಗಿ ಈ ಶಿಬಿರವನ್ನು ಮಾಡಿರುವುದು ಶ್ಲಾಘನೀಯವಾಗಿದೆ. ರಕ್ತದಾನವು ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಸೇವಾಭಾರತಿ ನೀರ್ಚಾಲು ಘಟಕ ಸದಾಶಿವ ಮಾಸ್ತರ್ ಬೇಳ, ಬಾಲಸುಬ್ರಹ್ಮಣ್ಯ ಮಲ್ಲಡ್ಕ, ಪ್ರದೀಪ್ ಮಾಸ್ತರ್ ಬೇಳ, ಶಶಿಧರ ಏಣಿಯರ್ಪು, ನವೀನ ಏಣಿಯರ್ಪು, ಬಾಲಕೃಷ್ಣ ಏಣಿಯರ್ಪು, ರಾಜೇಶ್ ರೈ ಬದಿಯಡ್ಕ ಹಾಗೂ ಸದಸ್ಯರು ನೇತೃತ್ವ ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!