ಇಬ್ಬರು ಸಿದ್ಧ ವಯಸ್ಕರ ನಡುವಿನ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ: ಕೇರಳ ಹೈಕೋರ್ಟ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಇಬ್ಬರು ಸಿದ್ಧ ವಯಸ್ಕರ ನಡುವಿನ ಲೈಂಗಿಕ ಸಂಬಂಧವನ್ನ ಸೆಕ್ಷನ್​​ 376ರ ಅಡಿ ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್​ ಮಹತ್ವದ ಆದೇಶ ನೀಡಿದೆ.
ದಂಪತಿಗಳು ತಮ್ಮ ನಡುವಿನ ಸಂಬಂಧ ಮುರಿದುಕೊಂಡ ಬಳಿಕ ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದಿರುವ ಕೇರಳ ಹೈಕೋರ್ಟ್, ಮದುವೆಯಾಗುವುದಾಗಿ ಸುಳ್ಳು ಭರವಸೆ ಮೇಲೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸುತ್ತಿದ್ದು, ಅಂತಹ ಪ್ರಕರಣಗಳಲ್ಲಿ ಈ ಆದೇಶ ಸಂಬಂಧ ಪಡುವುದಿಲ್ಲ ಎಂದೂ ನ್ಯಾಯಮೂರ್ತಿ ಬೆಚ್ಚು ಕುರಿಯನ್​ ಥಾಮಸ್ ಸ್ಪಷ್ಟಪಡಿಸಿದ್ದಾರೆ. ಇತ್ತಿಚೀನ ದಿನಗಳಲ್ಲಿ ಯುವ ವಯಸ್ಕರರಲ್ಲಿ ಇಷ್ಟದ ಲೈಂಗಿಕ ಸಂಬಂಧ ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟಿದೆ.
ನಾಥ್​ ಎಂಬ ವಕೀಲ ತಮ್ಮ ಸಹೋದ್ಯೋಗಿ ಜೊತೆ ನಾಲ್ಕು ವರ್ಷಗಳಿಂದ ಒಮ್ಮತದ ಸಂಬಂಧ ಹೊಂದಿದ್ದರು. ಆದರೆ, ಬೇರೆ ಮಹಿಳೆ ಜೊತೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ನಾಥ್​ ಮದುವೆಯಾಗಲು ನಿರ್ಧರಿಸಿದ್ದ ಯುವತಿಯನ್ನ ಹೋಟೆಲ್​ನಲ್ಲಿ ಭೇಟಿಯಾಗಿದ್ದರು. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಯತ್ನಿಸಿದ್ದಳು.
ಪ್ರಕರಣದ ಬಗ್ಗೆ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಕಳೆದ ತಿಂಗಳು ನಾಥ್​ ಅವರನ್ನ ಬಂಧನ ಮಾಡಲಾಗಿತ್ತು. ಆದರೆ, ಕೇರಳ ಹೈಕೋರ್ಟ್​ನಲ್ಲಿ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಈ ವೇಳೆ ನಾಥ್ ಪರ ವಕೀಲರು ವಾದ ಮಂಡಿಸಿದ್ದು, ಮಹಿಳೆ ಜೊತೆ ನಡೆದ ಲೈಂಗಿಕ ಸಂಬಂಧ ಒಮ್ಮತದಿಂದ ಕೂಡಿತ್ತು. ಇದು ಸಂಪೂರ್ಣವಾಗಿ ಒಪ್ಪಿಗೆ ಮತ್ತು ಪ್ರೀತಿಯಿಂದ ನಡೆದಿದೆ ಎಂದು ಹೇಳಿದ್ದಾರೆ.
ವಾದ – ಪ್ರತಿವಾದ ಆಲಿಸಿರುವ ಕೋರ್ಟ್​​ ಪ್ರಕರಣ ಗಂಭೀರ ಸ್ವರೂಪದಾಗಿದೆ. ಹೀಗಾಗಿ, ಆರೋಪಿ ಬೇರೆ ಕಡೆ ಪಲಾಯನ ಮಾಡುವಂತಿಲ್ಲ. ಆದರೆ, ಇಬ್ಬರು ಸಿದ್ಧ ವಯಸ್ಕರ ನಡುವಿನ ಲೈಂಗಿಕ ಸಂಬಂಧ ಅತ್ಯಾಚಾರ ಎಂದು ಪರಿಗಣಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!