ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಬಹುಭಾಷಾ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರನ್ನು ಹೈದರಾಬಾದ್ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜಾನಿ ಮಾಸ್ಟರ್ ನಿಜವಾದ ಹೆಸರು ಶೇಕ್ ಜಾನಿ ಬಾಷಾ ಎಂಬುದಾಗಿದ್ದು, ಸೈಬರಾಬಾದ್ ಪೊಲೀಸರು ಗುರುವಾರ ಗೋವಾದಲ್ಲಿ ಆತನನ್ನು ಬಂಧಿಸಿದ್ದರು.
ಬಳಿಕ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾರೆಂಟ್ ಮೇಲೆ ಹೈದರಾಬಾದ್‌ಗೆ ಕರೆತಂದಿದ್ದರು.
ಅವರನ್ನು ಇಂದು ಹೈದರಾಬಾದ್‌ಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿರುವ ಅವರನ್ನು ಚಂಚಲಗುಡಾ ಜೈಲಿಗೆ ಕಳುಹಿಸಲಾಗಿದೆ.