ಹೊಸದಿಗಂತ ವರದಿ ಕಾರವಾರ:
ತಾಲೂಕಿನ ಮಾಜಾಳಿಯಲ್ಲಿ ಕೂದಲು ಕತ್ತರಿಸಲು ಹೇರ್ ಕಟಿಂಗ್ ಸೆಲೂನಿಗೆ ತೆರಳಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ತಲೆಮರೆಸಿಕೊಂಡಿರುವ ಉತ್ತರ ಪ್ರದೇಶ ಮೂಲದ ಕ್ಷೌರಿಕ ಕೆಲಸಗಾರ ಆರೋಪಿ ಸಂಶಾದ್ ಎಂಬಾತನನ್ನು ಬಂಧಿಸಿರುವಂತೆ ಒತ್ತಾಯಿಸಿ ಚಿತ್ತಾಕುಲ, ಮಾಜಾಳಿ ಸುತ್ತ ಮುತ್ತಲಿನ ಗ್ರಾಮಸ್ಥರು ಚಿತ್ತಾಕುಲ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಿದ್ದು ಕೃತ್ಯ ಎಸಗಿರುವ ಆರೋಪಿಯನ್ನು ಕೂಡಲೇ ಬಂಧಿಸಿ ಬಾಲಕಿಗೆ ನ್ಯಾಯ ಒದಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿ.ವೈ.ಎಸ್.ಪಿ ಲೋಕಾಪುರ್ ಠಾಣೆಗೆ ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಮಾತನಾಡಿ ಆರೋಪಿತನ ಪತ್ತೆಗೆ ಪೊಲೀಸ್ ಇಲಾಖೆ ಕಾರ್ಯಪೃವೃತ್ತರಾಗಿದ್ದು ಶೀಘ್ರದಲ್ಲಿ ಬಂಧಿಸಿ ಕಾನೂನೂ ಕ್ರಮ ಜರುಗಿಸುವ ಭರವಸೆ ನೀಡಿದರು.
ಪ್ರಮುಖರುಗಳಾದ ಸುಭಾಷ ಗುನಗಿ,ಸೂರಜ ದೇಸಾಯಿ, ಪ್ರಣಮ್ ರಾಣೆ,ಗುರು ಸಾವಂತ್, ಸ್ವಾತಿ ದೇಸಾಯಿ, ಚಂದನ ಸಾವಂತ್,ಅಶೋಕ ರಾಣೆ, ಸಂದೇಶ ತಳೇಕರ್,ರಾಜೇಶ ಆಚಾರಿ,ಸುರೇಂದ್ರ ಬಾಂದೇಕರ್ ಮೊದಲಾದವರು ಪಾಲ್ಗೊಂಡಿದ್ದರು.



