October 9, 2026
Friday, October 9, 2026
spot_img

ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ

ಹೊಸದಿಗಂತ ವರದಿ ಗೋಣಿಕೊಪ್ಪ:

ಗೋಣಿಕೊಪ್ಪ ಮಾಕುಕಟ್ಟೆ ಬಳಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಕುಂಜಿಲ ಗ್ರಾಮದ ಕಾಕೇರ ಡಿ. ಭರತ್ (57) ಎಂಬಾತನೇ ಬಂಧಿತ ಆರೋಪಿ.

ಆ.28ರಂದು ಗೋಣಿಕೊಪ್ಪ ಮಾರುಕಟ್ಟೆ ಬಳಿ ಇದ್ದ ಬಾಲಕಿಯನ್ನು ಅಲ್ಲಿನ ಸಾರ್ವಜನಿಕ ಶೌಚಾಲಯದ ಬಳಿ ಕರೆದೊಯ್ದ ಆರೋಪಿ, ಆಕೆಯ ಮೇಲೆ ಲೈಂಗಿಂಕ ದೌರ್ಜನ್ಯ ಎಸಗಿ, ಬಳಿಕ ಅದೇ ಸ್ಥಳದಲ್ಲಿ ಬಿಟ್ಟು ತೆರಳಿದ್ದಾಗಿ ಹೇಳಲಾಗಿದೆ.

ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ: 111/2026, ಕಲಂ: 64(2)(ಐ), 65(1) ಬಿಎನ್‌ಎಸ್ ಮತ್ತು ಕಲಂ 4(1), 6(1) ಪೋಕೋ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿತ್ತು.
ದೂರು ಸ್ವೀಕರಿಸಿದ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ,ಆರೋಪಿಯ ಸುಳಿವು ಲಭ್ಯವಾಗಿದ್ದು, ಆತನನ್ನು ಆ.30ರಂದು ವೀರಾಜಪೇಟೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೃತ್ಯ ಬಯಲಿಗೆ ಬಂದಿದೆ.

ಆತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Must Read