ಹೊಸದಿಗಂತ ಡಿಜಿಟಲ್ ಡೆಸ್ಕ್:
2018ರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಕ್ರಿಶ್ಚಿಯನ್ ಪಾದ್ರಿ ಬಜಿಂದರ್ ಸಿಂಗ್ ರನ್ನು ದೋಷಿ ಎಂದು ಮೊಹಾಲಿಯ ವಿಶೇಷ ಪೋಕ್ಸೊ ನ್ಯಾಯಾಲಯ ಘೋಷಿಸಿದೆ.
ಬಜಿಂದರ್ ಸಿಂಗ್ ಶುಕ್ರವಾರ ಇತರ 6 ಆರೋಪಿಗಳೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 5 ಸಹ-ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಆದರೆ ಬಜಿಂದರ್ ಸಿಂಗ್ ಗೆ ಏಪ್ರಿಲ್ 1ರಂದು ನ್ಯಾಯಾಲಯದ ಮುಂದೆ ಹಾಜರಗುವಂತೆ ಸೂಚಿಸಲಾಗಿದೆ.
ಸ್ವಯಂ ಘೋಷಿತ ದೇವಮಾನವ ಪಾದ್ರಿ ಮತ್ತು ಪಂಜಾಬ್ ಪ್ರವಾದಿ ಬಜಿಂದರ್ ಸಿಂಗ್ 2018ರ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ. ಪಂಜಾಬ್‌ನ ಮೊಹಾಲಿಯ ನ್ಯಾಯಾಲಯವು ಪಾದ್ರಿಯನ್ನು ಲೈಂಗಿಕ ದುರುಪಯೋಗದ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿದೆ.