ಲೈಂಗಿಕ ದೌರ್ಜನ್ಯ ಆರೋಪ: ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಚ್​ಶೀಟ್​​ ಸಲ್ಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್​​ನ ಹಿರಿಯ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಮುಂಬೈನ ಪೊಲೀಸರು ಕೋರ್ಟ್​ಗೆ ಚಾರ್ಚ್​ಶೀಟ್​​ ಸಲ್ಲಿಕೆ ಮಾಡಿದ್ದಾರೆ .
2020ರಲ್ಲಿ ಮಹಿಳಾ ಡ್ಯಾನ್ಸರ್​ರೊಬ್ಬರು ಲೈಂಗಿಕ ದೌರ್ಜನ್ಯ, ಹಿಂಬಾಲಿಸುವುದು ಮತ್ತು ಕಿರುಕುಳದ ಆರೋಪ ಮಾಡಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿತ್ತು.
ಇತ್ತೀಚೆಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೃತ್ಯ ನಿರ್ದೇಶಕರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ನೃತ್ಯ ನಿರ್ದೇಶಕನ ವಿರುದ್ಧ ಪೊಲೀಸರು ಹಲವು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳಾ ಸಹ – ನರ್ತಕಿ ಪ್ರಕಾರ, ಅವರು ಗಣೇಶ್ ಆಚಾರ್ಯ ಅವರೊಂದಿಗಿನ ಹಲವಾರು ಸಭೆಗಳಲ್ಲಿ ವಿರೋಧಿಸಿದ್ದರು. ಹೀಗಾಗಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ಗಣೇಶ್ ಆಚಾರ್ಯ ಅವರ ಸಹಾಯಕಿ ಆಕೆಗೆ ಥಳಿಸಿದ್ದು, ಮಾನಹಾನಿ ಮಾಡಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ. ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!